ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (ಯುಐಡಿಎಐ) ಆಧಾರ್ ಪರಿಷ್ಕರಣೆಯ ಹೊಸ ವಿಧಾನವನ್ನು ಪರಿಚಯಿಸಿದೆ. ಕುಟುಂಬದ ಮುಖ್ಯಸ್ಥರ ಒಪ್ಪಿಗೆಯ ಪಡೆದು ಇನ್ನು ಮುಂದೆ ಆನ್ಲೈನ್ನಲ್ಲಿಯೇ ವಿಳಾಸವನ್ನು ಬದಲಾಯಿಸುವ ಅವಕಾಶವಿದೆ.
ಯಾವುದಾದರೂ ಕೆಲಸದ ನಿಮಿತ್ತ ಬೇರೆಡೆ ವರ್ಗವಾಗಿ ನೆಲೆಸಿದರೆ ಅಲ್ಲಿಯ ವಿಳಾಸ ಬದಲಿಸಲು ಇಲ್ಲಿಯವರೆಗೆ ಕಷ್ಟವಿತ್ತು. ಈಗ ಕುಟುಂಬದ ಮುಖ್ಯಸ್ಥರ ಅನುಮತಿ ಪಡೆದು ಆನ್ಲೈನ್ನಲ್ಲಿ ವಿಳಾಸ ಬದಲಿಸಬಹುದು.
ಸಂಬಂಧಿಸಿದ ವ್ಯಕ್ತಿ ರೇಷನ್ ಕಾರ್ಡ್, ಅಂಕಗಳ ಪ್ರಮಾಣಪತ್ರ , ಮದುವೆ ಪ್ರಮಾಣಪತ್ರ, ಪಾಸ್ಪೋರ್ಟ್ ಸೇರಿದಂತೆ ಯಾವುದೇ ಅಧಿಕೃತ ದಾಖಲೆಗಳನ್ನು ಸಲ್ಲಿಸಿ ಇದನ್ನು ಬದಲಾಯಿಸಿಕೊಳ್ಳಬಹುದು. ಅಂದರೆ ಕುಟುಂಬದ ಮುಖ್ಯಸ್ಥರ ಜೊತೆಗೆ ಸಂಬಂಧ ಇದೆ ಎಂದು ಹೇಳುವ ದಾಖಲೆ ಇದಾಗಿರಬೇಕು.
ಕುಟುಂಬದ ಮುಖ್ಯಸ್ಥರ ಒಪ್ಪಿಗೆಯ ಮೇರೆಗೆ ಆಧಾರ್ ತಿದ್ದುಪಡಿಯಿಂದಾಗಿ ಕುಟುಂಬವೊಂದು ಹಲವು ಕಾರಣಕ್ಕೆ ಬೇರೊಂದು ಪ್ರದೇಶದಲ್ಲಿ ವಾಸವಾಗಿದ್ದರೆ, ಅಲ್ಲಿನ ವಿಳಾಸವನ್ನು ಅಧಿಕೃತಗೊಳಿಸಬೇಕಾದಲ್ಲಿ ಇದು ನೆರವಾಗಲಿದೆ. ಒಂದು ವೇಳೆ ಕುಟುಂಬದ ಮುಖ್ಯಸ್ಥರ ಜೊತೆ ಸಂಬಂಧ ಇರುವಂಥ ಯಾವುದೇ ದಾಖಲೆ ಇಲ್ಲದಿದ್ದರೂ ವಿಳಾಸ ಬದಲಿಸಿಕೊಳ್ಳಲು ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ.