ಯಾವ ಹಿರೋಯಿನ್‌ ಗೂ ಕಮ್ಮಿಯಿಲ್ಲ ಟೀಂ ಇಂಡಿಯಾದ ಈ ಮಹಿಳಾ ಕ್ರಿಕೆಟರ್ಸ್‌…!

ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿಯರು ತಮ್ಮ ಅತ್ಯುತ್ತಮ ಆಟದಿಂದಾಗಿ ವಿಶ್ವದಾದ್ಯಂತ ಖ್ಯಾತಿಯನ್ನು ಗಳಿಸುತ್ತಿದ್ದಾರೆ. ಅವರ ಮೋಡಿ ಮೈದಾನಕ್ಕೆ ಮಾತ್ರ ಸೀಮಿತವಾಗಿಲ್ಲ. ಕ್ರಿಕೆಟ್‌ ಕ್ಷೇತ್ರದ ಹೊರಗೂ ಸಾಕಷ್ಟು ಚರ್ಚೆಯಲ್ಲಿದ್ದಾರೆ.

ಇದಕ್ಕೆ ಕಾರಣ ಟೀಂ ಇಂಡಿಯಾದ ಆಟಗಾರ್ತಿಯರ ಸೌಂದರ್ಯ. ಭಾರತದ ಅನೇಕ ಮಹಿಳಾ ಕ್ರಿಕೆಟಿಗರು ನಟಿಯರನ್ನೂ ಮೀರಿಸುವಂಥ ಚೆಲುವೆಯರು.

ಹಾಗಾಗಿ ಸೋಷಿಯಲ್ ಮೀಡಿಯಾದಲ್ಲಿ ಅವರ ಫ್ಯಾನ್ ಫಾಲೋಯಿಂಗ್ ಕೂಡ ಅದ್ಭುತವಾಗಿದೆ. ಮಹಿಳಾ ಕ್ರಿಕೆಟ್ಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪ್ರಾತಿನಿಧ್ಯ ಸಿಗುತ್ತಿದೆ. ಮಹಿಳಾ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಕ್ರೀಡಾಂಗಣದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರುತ್ತಾರೆ.

ಸ್ಮೃತಿ ಮಂದಣ್ಣ: ಎಡಗೈ ಸ್ಟಾರ್ ಬ್ಯಾಟ್ಸ್‌ಮನ್ ಸ್ಮೃತಿ ಮಂದಣ್ಣ ಅದ್ಭುತ ಸೌಂದರ್ಯವತಿ. ಇತ್ತೀಚೆಗಷ್ಟೇ ಮ್ಯಾಗಜಿನ್‌ಗಾಗಿ ಫೋಟೋಶೂಟ್ ಕೂಡ ಮಾಡಿದ್ದಾರೆ ಸ್ಮೃತಿ. 26 ವರ್ಷದ ಸ್ಮೃತಿ ಮುಂಬೈ ನಿವಾಸಿ. ಅವರು ಮಹಿಳಾ ಬಿಗ್ ಬ್ಯಾಷ್ ಲೀಗ್‌ನ ಭಾಗವಾಗಿದ್ದಾರೆ.

ಮೋನಾ ಮೆಶ್ರಮ್‌: ಭಾರತೀಯ ಮಹಿಳಾ ಕ್ರಿಕೆಟ್‌ ಆಟಗಾರ್ತಿ ಮೋನಾ ಕೌಡ ತಮ್ಮ ಸೌಂದರ್ಯದಿಂದ ಸಾಕಷ್ಟು ಕ್ರಿಕೆಟ್‌ ಪ್ರೇಮಿಗಳನ್ನು ಸೆಳೆಯುತ್ತಿದ್ದಾರೆ. ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸಿವೆ. ನಾಗ್ಪುರದ ನಿವಾಸಿಯಾಗಿರುವ ಮೋನಾ ಇದುವರೆಗೆ 37 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ಹರ್ಲೀನ್‌ ಡಿಯೋಲ್‌: ಚಂಡೀಗಢದ ನಿವಾಸಿ ಹರ್ಲೀನ್ ಡಿಯೋಲ್ ಬಾಲಿವುಡ್‌ ನಟಿಯರಿಗಿಂತ ಕಡಿಮೆಯೇನಿಲ್ಲ. 24 ವರ್ಷದ ಹರ್ಲೀನ್‌, 2019 ರಲ್ಲಿ ಅಂತರಾಷ್ಟ್ರೀಯ ಪಾದಾರ್ಪಣೆ ಮಾಡಿದರು. ಹರ್ಲೀನ್ ಇದುವರೆಗೆ 7 ODI ಮತ್ತು 16 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ವೇದಾ ಕೃಷ್ಣಮೂರ್ತಿ: ಮಧ್ಯಮ ಕ್ರಮಾಂಕದ ಸ್ಟಾರ್ ಬ್ಯಾಟರ್ ವೇದಾ ಕೃಷ್ಣಮೂರ್ತಿ ಕೂಡ ಸುಂದರ ಮಹಿಳಾ ಕ್ರಿಕೆಟರ್‌ಗಳಲ್ಲಿ ಒಬ್ಬರು.

ಇತ್ತೀಚೆಗೆ ವೇದಾ ನಿಶ್ಚಿತಾರ್ಥ ಮಾಡಿಕೊಂಡರು. ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ವೇದಾ 48 ODI ಮತ್ತು 76 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ಪ್ರಿಯಾ ಪುನಿಯಾ: ಭಾರತದ ಸುಂದರ ಮಹಿಳಾ ಕ್ರಿಕೆಟಿಗರಲ್ಲಿ ಪ್ರಿಯಾ ಪುನಿಯಾ ಕೂಡ ಇದ್ದಾರೆ. ಪ್ರಿಯಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಅವರ ಫೋಟೋಗಳು ಸಹ ವೈರಲ್ ಆಗಿವೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read