ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಅವರ ಸರ್ಕಾರ ಪಿಎಫ್‌ಐ ವಿರುದ್ದದ ಕ್ರಿಮಿನಲ್ ಪ್ರಕರಣಗಳನ್ನು ಹಿಂದಕ್ಕೆ ಪಡೆದಿತ್ತು ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು.
ಇದಕ್ಕೆ ಇಂದು ತಿರುಗೇಟು ನೀಡಿರುವ ಸಿದ್ದರಾಮಯ್ಯನವರು, 175 ಪಿಎಫ್ಐ ಕಾರ್ಯಕರ್ತರ ವಿರುದ್ದದ ಮೊಕದ್ದಮೆಗಳನ್ನು ನಮ್ಮ ಕಾಂಗ್ರೆಸ್ ಸರ್ಕಾರ ವಾಪಸು ಪಡೆದಿದೆ ಎಂದು ಬೊಗಳೆ ಬಿಡುತ್ತಿರುವ ಬಿಜೆಪಿ ನಾಯಕರೇ, ನಿಮಗೆ ದಮ್ಮು-ತಾಖತ್ ಇದ್ದರೆ 6 ತಿಂಗಳ ಹಿಂದಿನ ನನ್ನ ಪತ್ರಕ್ಕೆ ಥಟ್ ಎಂದು ಉತ್ತರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಹೇಳಿಬಿಡಿ ಎಂದು ವ್ಯಂಗ್ಯವಾಡಿದ್ದಾರೆ.
ಅಲ್ಲದೇ ಆರು ತಿಂಗಳ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಬರೆದ ಪತ್ರವನ್ನೂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
175 ಪಿಎಫ್ಐ ಕಾರ್ಯಕರ್ತರ ವಿರುದ್ದದ ಮೊಕದ್ದಮೆಗಳನ್ನು ನಮ್ಮ ಕಾಂಗ್ರೆಸ್ ಸರ್ಕಾರ ವಾಪಸು ಪಡೆದಿದೆ ಎಂದು ಬೊಗಳೆ ಬಿಡುತ್ತಿರುವ @BJP4Karnataka ನಾಯಕರೇ,
ನಿಮಗೆ ದಮ್ಮು-ತಾಖತ್ ಇದ್ದರೆ 6 ತಿಂಗಳ ಹಿಂದಿನ ನನ್ನ ಪತ್ರಕ್ಕೆ ಥಟ್ ಎಂದು ಉತ್ತರಿಸಲು @CMofKarnataka ಅವರಿಗೆ ಹೇಳಿಬಿಡಿ. pic.twitter.com/ABc9RKWyQd
— Siddaramaiah (@siddaramaiah) January 4, 2023