ಬೆಂಗಳೂರು: ದೇಶಾದ್ಯಂತ ರೂಪಾಂತರಿ ವೈರಸ್ BF.7 ಆತಂಕ ಎದುರಾಗಿರುವ ಬೆನ್ನಲ್ಲೇ ರಾಜ್ಯದಲ್ಲಿ ಮೊದಲ ಒಮಿಕ್ರಾನ್ ಉಪತಳಿ ಪತ್ತೆಯಾಗಿದೆ.
ದೇಶದಲ್ಲಿ ಮೊದಲ ಬಾರಿಗೆ ಗುಜರಾತ್ ನಲ್ಲಿ ಪತ್ತೆಯಾಗಿದ್ದ ಒಮಿಕ್ರಾನ್ ಉಪತಳಿ XBB.1.5 ಈಗ ಕರ್ನಾಟಕದಲ್ಲಿ ಪತ್ತೆಯಾಗಿದೆ. ಚಳಿಗಾಲದ ನಡುವೆ ಈಗ ಮತ್ತೊಂದು ಹೊಸ ವೈರಸ್ ಭೀತಿ ಆರಂಭವಾದಂತಾಗಿದೆ.
ಒಮಿಕ್ರಾನ್ ಉಪತಳಿ XBB.1.5 ಇದು BF.7 ವೈರಸ್ ಗಿಂತ ಅತಿ ವೇಗವಾಗಿ ಹರಡುತ್ತದೆ. ರೋಗನಿರೋಧಕ ಶಕ್ತಿಯನ್ನೇ ಕಡಿಮೆ ಮಾಡುತ್ತದೆ. ಹೀಗಾಗಿ ಒಮಿಕ್ರಾನ್ ರೂಪಾಂತರಿ ವೈರಸ್ ಬಗ್ಗೆ ಆತಂಕ ಹೆಚ್ಚಿದೆ.
ಈವರೆಗೆ ಗುಜರಾತ್ ನಲ್ಲಿ 3, ಕರ್ನಾಟಕದಲ್ಲಿ 1 ಹಾಗೂ ರಾಜಸ್ಥಾನದಲ್ಲಿ 1 ಪ್ರಕರಣ ಪತ್ತೆಯಾಗಿದೆ.