ಹೊಸ ವರ್ಷ ಶುರುವಾಗ್ತಾ ಇದ್ದಂತೆ ಎಲ್ಲರೂ ಕ್ಯಾಲೆಂಡರ್ ಬದಲಾಯಿಸ್ತಾರೆ. ಕಳೆದು ಹೋದ ಸಮಯ, ತಿಂಗಳು, ವರ್ಷದ ನೆನಪು, ಪಾಠಗಳ ಜೊತೆ ಹೊಸ ಜೀವನ ಶುರು ಮಾಡಲು ಪ್ರೇರಣೆ ನೀಡುತ್ತದೆ ಕ್ಯಾಲೆಂಡರ್. ವಾಸ್ತು ಶಾಸ್ತ್ರ ಹಾಗೂ ಫೆಂಗ್ ಶೂಯಿಯಲ್ಲಿ ಕೂಡ ಇದ್ರ ಬಗ್ಗೆ ಅನೇಕ ವಿಷಯಗಳನ್ನು ಹೇಳಲಾಗಿದೆ.
ಬಾಗಿಲಿನ ಮೇಲೆ ಎಂದೂ ಕ್ಯಾಲೆಂಡರ್ ಹಾಕಬೇಡಿ. ಇದು ಕುಟುಂಬಸ್ಥರ ಆಯಸ್ಸನ್ನು ಕಡಿಮೆ ಮಾಡುತ್ತದೆ. ಅದ್ರಲ್ಲೂ ಮುಖ್ಯ ದ್ವಾರದ ಮೇಲಂತೂ ಕ್ಯಾಲೆಂಡರ್ ಹಾಕಲೇಬೇಡಿ.
ಅನೇಕರು ಹೊಸ ಕ್ಯಾಲೆಂಡರ್ ಹಾಕ್ತಾರೆ. ಆದ್ರೆ ಹಳೆ ಕ್ಯಾಲೆಂಡರ್ ಮೇಲೆ ಹೊಸ ಕ್ಯಾಲೆಂಡರ್ ಹಾಕ್ತಾರೆ. ಹೀಗೆ ಮಾಡುವುದು ಅಶುಭ ಎನ್ನುತ್ತದೆ ವಾಸ್ತು ಶಾಸ್ತ್ರ. ಜೀವನದಲ್ಲಿ ಮುಂದೆ ಬರುವ ಪ್ರಗತಿಗೆ ಇದು ತಡೆಗೋಡೆಯಾಗುತ್ತದೆ.
ಪೂರ್ವ ಹಾಗೂ ಉತ್ತರ ದಿಕ್ಕಿಗೆ ಕ್ಯಾಲೆಂಡರ್ ಹಾಕುವುದರಿಂದ ಸಾಲ, ನಷ್ಟವನ್ನು ಎದುರಿಸಬೇಕಾಗುತ್ತದೆ.
ಬಾಗಿಲ ಹಿಂದೆ ಅಥವಾ ಮುಂದೆ ಕ್ಯಾಲೆಂಡರ್ ಹಾಕುವುದರಿಂದ ಕುಟುಂಬಸ್ಥರ ಆಯಸ್ಸು ಕಡಿಮೆಯಾಗುತ್ತದೆ.
ಪ್ರಾಣಿ ಹಾಗೂ ದುಃಖದ ಫೋಟೋ ಇರುವ ಕ್ಯಾಲೆಂಡರ್ ಹಾಕಬೇಡಿ.
ಪ್ರತಿ ತಿಂಗಳ ಮೊದಲ ದಿನವೇ ಕ್ಯಾಲೆಂಡರ್ ತಿಂಗಳು ಬದಲಾಯಿಸ್ತಾ ಇರಿ.