ಬಿಹಾರದಲ್ಲಿ ಓರ್ವ ಮಹಿಳೆ ಸಂಯೋಜಿತ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಭಾಗಲ್ಪುರದ ಕಜ್ರೈಲಿ ನಿವಾಸಿ ಅಂಜನಾ ದೇವಿ ಎಂಬ ಮಹಿಳೆ ಡಿಸೆಂಬರ್ 30 ರಂದು ಖಾಸಗಿ ಆಸ್ಪತ್ರೆಯಲ್ಲಿ ಸಯಾಮಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅವಳಿಗಳ ಎದೆ, ಹೊಟ್ಟೆ ಮತ್ತು ಬಾಯಿ ಎಲ್ಲವೂ ಒಟ್ಟಿಗೆ ಸೇರಿಕೊಂಡಿವೆ.
ಈ ಸಂಯೋಜಿತ ಅವಳಿಗಳಿಗೆ ಎರಡು ತಲೆ, ನಾಲ್ಕು ಕಾಲುಗಳು ಮತ್ತು ನಾಲ್ಕು ತೋಳುಗಳಿವೆ. ಈ ಮಕ್ಕಳನ್ನು ನೋಡಲು ಜನರು ದೂರದ ಊರುಗಳಿಂದ ಬರ್ತಿದ್ದಾರೆ. ಈ ರೀತಿಯ ಮಕ್ಕಳ ಜನನದ ಮಾಹಿತಿಯು ನೆರೆಹೊರೆಯಾದ್ಯಂತ ಕಾಳ್ಗಿಚ್ಚಿನಂತೆ ಹರಡುತ್ತಿದೆ.
ಕೆಲವರು ಮಕ್ಕಳನ್ನು ನೈಸರ್ಗಿಕ ಪವಾಡ ಎಂದು ಉಲ್ಲೇಖಿಸಿದರೆ, ಇತರರು ಇದನ್ನು ದೇವರ ಅವತಾರ ಎಂದು ಕರೆಯುತ್ತಿದ್ದಾರೆ.
ವರದಿ ಪ್ರಕಾರ, ಸಂತೋಷ್ ಕುಮಾರ್ ಅವರ ಪತ್ನಿ ಅಂಜನಾ ದೇವಿ ಅವರು ಘೋಷಿ ಟೋಲಾ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವಳಿಗಳಿಗೆ ನಾಲ್ಕು ಕೈಗಳು, ಎರಡು ತಲೆಗಳು ಮತ್ತು ಹೊಟ್ಟೆ ಮತ್ತು ಎದೆಯು ಸಂಪೂರ್ಣವಾಗಿ ಪಕ್ಕದಲ್ಲಿದೆ. ಮಕ್ಕಳು 28 ವಾರಗಳಲ್ಲಿ ಜನಿಸಿವೆ ಎಂದು ವರದಿಯಾಗಿದೆ.
ಈ ವಿಶಿಷ್ಟ ಮಗುವಿನ ತಾಯಿಗೆ ಸ್ತ್ರೀರೋಗತಜ್ಞ ಡಾ.ಅನ್ವೇಶಾ ಅವರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ. ಗುರುವಾರದಂದು ತಾಯಿಗೆ ನೋವು ಕಾಣಿಸಿಕೊಂಡಿದ್ದು, ಚಿಕಿತ್ಸೆ ಪಡೆಯುತ್ತಿರುವಾಗ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.