ತುಮಕೂರು: ಲಾರಿ ಟೈರ್ ಪರಿಶೀಲಿಸುವ ವೇಳೆ ಇದ್ದಕ್ಕಿದ್ದಂತೆ ಟೈರ್ ಸ್ಫೋಟಗೊಂಡ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೆ.ಬಿ.ಕ್ರಾಸ್ ಬಳಿ ನಡೆದಿದೆ.
ವೆಂಕಟೇಶ್ (43) ಮೃತ ಚಾಲಕ. ತುಮಕೂರಿನ ಸೋಂಪುರ ಗ್ರಾಮದ ನಿವಾಸಿ. ಲಾರಿ ನಿಲ್ಲಿಸಿ ಟೈರ್ ಪರಿಶೀಲಿಸುತ್ತಿದ್ದಾಗ ಟೈರ್ ಸ್ಫೋಟಗೊಂಡು ಈ ದುರಂತ ಸಂಭವಿಸಿದೆ.
ಲಾರಿ ಚಾಲಕ ವೆಂಕಟೇಶ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಿಬ್ಬನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.