ವಿಶ್ವದ ಅತೀ ದೊಡ್ಡ ಹಾಕಿ ಕ್ರೀಡಾಂಗಣ ಲೋಕಾರ್ಪಣೆಗೆ ಸಿದ್ದ; ಇದರ ವಿಶೇಷತೆಗಳೇನು ಗೊತ್ತಾ..?

ನವದೆಹಲಿ: ವಿಶ್ವದಲ್ಲೇ ಅತೀ ದೊಡ್ಡ ಹಾಕಿ ಕ್ರೀಡಾಂಗಣ ಲೋಕಾರ್ಪಣೆಗೆ ಸಿದ್ದವಾಗಿದೆ. ಜೊತೆಗೆ ದೊಡ್ಡ ಕ್ರೀಡಾಂಗಣ ಎಂಬ ದಾಖಲೆಯನ್ನೂ ನಿರ್ಮಿಸುತ್ತಿದೆ. ಈ ಕ್ರೀಡಾಂಗಣ ಒಡಿಶಾದ ರೂರ್ಕೆಲಾದಲ್ಲಿ ನಿರ್ಮಾಣವಾಗಿದೆ‌. ಹಲವಾರು ವಿಶೇಷತೆಗಳನ್ನೊಳಗೊಂಡಿರುವ ಈ ಕ್ರೀಡಾಂಗಣ, ಜನವರಿ 5ರಂದು ಉದ್ಘಾಟನೆಗೊಳ್ಳಲಿದೆ.

ಹೌದು, ಸುಮಾರು 15 ಎಕರೆ ವಿಸ್ತಾರ ಹೊಂದಿರುವ ಈ ಹಾಕಿ ಕ್ರೀಡಾಂಗಣ ವಿಶ್ವದ ಮೊದಲ ಪರಿಸರ ಸ್ನೇಹಿ ಹಾಕಿ ಕ್ರೀಡಾಂಗಣ ಎಂಬ ಹೆಗ್ಗುರುತು ಹೊಂದಿದೆ. ಒಂದೇ ಬಾರಿಗೆ ಕ್ರೀಡಾಂಗಣದಲ್ಲಿ 27 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ವ್ಯವಸ್ಥೆ ಮಾಡಲಾಗಿದೆ‌. ಇಲ್ಲಿ ಅಭ್ಯಾಸದ ಪಿಚ್ ಮತ್ತು ಬಟ್ಟೆ ಬದಲಾಯಿಸುವ ಕೋಣೆಗೆ ಸಂಪರ್ಕ ಕಲ್ಪಿಸಲು ಸುರಂಗವನ್ನು ಮಾಡಲಾಗಿದೆ. ಪಿಚ್ ಬಳಿ ಫಿಟ್‌ನೆಸ್ ಸೆಂಟರ್, ರಿಕವರಿ ಸೆಂಟರ್ ಮತ್ತು ಹೈಡೋಥೆರಪಿ ಪೂಲ್‌ನ್ನು ನಿರ್ಮಿಸಲಾಗಿದೆ.

ಇದರಲ್ಲಿ ಬರುವ ಜನವರಿ 13 ರಿಂದ ಹಾಕಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಕ್ರೀಡಾಂಗಣ ಲೋಕಾರ್ಪಣೆಗೊಂಡ ನಂತರ ನಡೆಯುವ ಮೊದಲ ಪಂದ್ಯ ಇದಾಗಿದೆ. ಈ ಕ್ರೀಡಾಂಗಣಕ್ಕೆ ದೇಶದ ಮಹಾನ್ ಬುಡಕಟ್ಟು ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಹೆಸರನ್ನು ಇಡಲಾಗಿದೆ. ಈ ಕ್ರಿಡಾಂಗಣದ ಮತ್ತೊಂದು ವಿಶೇಷ ಅಂದರೆ ಇದು ಭೂಕಂಪ ರಹಿತವಾದ ಕ್ರೀಡಾಂಗಣ ಅಂತೆ. ಸುಮಾರು 300 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read