ಶ್ರದ್ಧಾ ಮರ್ಡರ್ ಕೇಸ್, ತಾನು ಪ್ರೀತಿಸಿದ ಹುಡುಗಿಯನ್ನೇ 35ಪೀಸ್ ಮಾಡಿದ್ದ ಕಟುಕ ಪ್ರಿಯಕರನ ಪ್ರೇಮ್ ಕಹಾನಿ. ಇಂದಿನ ಕಾಲದಲ್ಲಿ ಕೆಲ ಯುವಕರ ಪಾಲಿಗೆ ಪ್ರೀತಿ, ಪ್ರೇಮ್ ಅನ್ನೊದು ಕೇವಲ ಶೋಕಿ ಅನ್ನೋ ಹಾಗಾಗಿದೆ. ಆದರೆ ಇದು ಎರಡು ಹೃದಯಗಳ ಸಂಗಮ. ಇದರ ಮೌಲ್ಯ ಪ್ರೀತಿಸಿದವರಿಗೆನೇ ಗೊತ್ತು.
ಇಲ್ಲೊಬ್ಬ ಪ್ರೇಮಿ ಇದ್ದಾನೆ ನೋಡಿ. ಆತ ತನ್ನ ಸಂಗಾತಿಯನ್ನ ಪ್ರೀತಿಸುವ ಪರಿ ನೋಡಿ, ಪ್ರತಿಯೊಬ್ಬ ಹೇಳೋ ಮಾತು ಒಂದೇ. ಪ್ರೀತಿಸಿದರೆ ಇಷ್ಟು ಪರಿಶುದ್ಧ ಮನಸ್ಸಿನಿಂದ ಪ್ರೀತಿಸಬೇಕು. ಚೀನಾದ ಹುನಾನ್ ಪ್ರಾಂತದಲ್ಲಿರುವ ಈ ವ್ಯಕ್ತಿಯ ಹೆಸರು ಶೂ ಝಿಲಿ. ಈತ ಪ್ರೀತಿಸಿದ ಹುಡುಗಿ ಹೆಸರು ಹುವಾಂಗ್ ಕಿಯುನ್. ಇವರಿಬ್ಬರದ್ದೂ ಪ್ರೇಮ್ ಕಹಾನಿ ಶುರುವಾಗಿದ್ದು 31 ವರ್ಷದ ಹಿಂದೆ.
ಇವರಿಬ್ಬರ ಪರಿಚಯ 1992ರಲ್ಲಿ ಆಗಿತ್ತು. ಆಗ ಶೂ ಝಿಲಿಗೆ 29ವರ್ಷ, ಇನ್ನೂ ಹುವಾಂಗ್ ಕಿಯುನ್ 21 ವರ್ಷವಾಗಿತ್ತು. ಪರಿಚಯ, ಪ್ರೀತಿಯ ರೂಪ ಪಡೆದ ನಂತರ ಇವರು ಮದುವೆ ಆಗುವುದಕ್ಕೆ ನಿರ್ಧಾರ ಮಾಡಿದ್ದರು. ಆದರೆ ವಿಧಿಯ ಕ್ರೂರ ಆಟ ನೋಡಿ, ಅದೇ ಸಮಯದಲ್ಲಿ ಇವರಿಬ್ಬರೂ ಪ್ರಯಾಣ ಮಾಡುತ್ತಿದ್ದ ವಾಹನ ಅಪಘಾತಕ್ಕೊಳಗಾಗುತ್ತೆ.
ಅಪಘಾತದಲ್ಲಿ ಶೂ ಝಿಲಿಗೆ ಚಿಕ್ಕಪುಟ್ಟ ಗಾಯಗಳಾಗಿದ್ರೆ, ಇನ್ನು ಹವಾಂಗ್ ಕಿಯುನ್ ಅವರ ಬೆನ್ನುಮೂಳೆ ಮುರಿದು ಹೋಗುತ್ತೆ. ಇದರಿಂದ ಅವರು ಪ್ಯಾರಲಿಸಿಸ್‌ಗೆ ಒಳಗಾಗುತ್ತಾರೆ. ಅಂದಿನಿಂದ ಅವರು ಹಾಸಿಗೆ ಹಿಡಿದು ಬಿಟ್ಟಿದ್ದರು. ಹುವಾಂಗ್ ಪರಿಸ್ಥಿತಿ ನೋಡಿ, ಅನೇಕರು ಶೂ ಝಿಲಿಗೆ ಬೇರೆ ಮದುವೆ ಆಗುವುದಕ್ಕೆ ಸಲಹೆ ಕೊಟ್ಟರು. ಅಷ್ಟೆ ಅಲ್ಲ ಆಕೆಯನ್ನ ಮದುವೆ ಆದರೆ ಜೀವನ ಪರ್ಯಂತ ಆಕೆಯ ಆರೈಕೆಯಲ್ಲೇ ಕಳೆಯಬೇಕಾಗುತ್ತೆ ಅನ್ನೊ ಕಿವಿಮಾತನ್ನ ಹೇಳಿದರು. ಆದರೆ ಶೂ ಝಿಲಿಗೆ ಈ ಯಾವ ಮಾತು ಕಿವಿಗೆ ಬಿದ್ದಿರಲಿಲ್ಲ. ಅವರು ತಾವು ಪ್ರೀತಿಸಿದ ಹುಡುಗಿಯ ಕೈ ಬಿಟ್ಟಿರಲಿಲ್ಲ.
ಹವಾಂಗ್ ಕಿಯು ಅವರನ್ನ ಖುಷಿಯಾಗಿ ಇಡಲು ಶೂ ಝಿಲಿ ಎಲ್ಲ ರೀತಿ ಪ್ರಯತ್ನ ಪಡುತ್ತಿದ್ದಾರೆ. ಜೊತೆಗೆ ಹುವಾಂಗ್‌ಗಾಗಿಯೇ ಶೂ ಯರ್ಹೂ ನುಡಿಸುವುದನ್ನ ಕಲಿತಿದ್ದಾರೆ. ಇಲ್ಲಿ ಗಮನಿಸಬೇಕಾಗಿರುವ ವಿಚಾರ ಏನಂದರೆ, ಹುವಾಂಗ್ ಕಿಯುನ್ ಅವರು ಹೀಗೆ ಹಾಸಿಗೆ ಹಿಡಿದಿರುವ ವಿಚಾರ ಅವರ ಮನೆಯವರಿಗೆ ಇಷ್ಟು ದಿನ ಗೊತ್ತೇ ಇರಲಿಲ್ಲವಂತೆ. ಹವಾಂಗ್ ಕಿಯುನ್ ಅವರ ತಂದೆ ಮಗಳನ್ನ ಭೇಟಿಯಾಗಲು ಬಂದಾಗಲೇ ಮಗಳ ಪರಿಸ್ಥಿತಿ ನೋಡಿ ಬೇಸರ ಪಟ್ಟುಕೊಂಡಿದ್ದರು. ಜೊತೆಗೆ ಇಷ್ಟು ಒಳ್ಳೆಯ ಸಂಗಾತಿ ಆಕೆಯ ಆರೈಕೆ ಮಾಡುವುದನ್ನ ನೋಡಿ ಕಣ್ಣೀರು ಹಾಕಿದ್ದರು. ಈಗ ಸುತ್ತಮುತ್ತಲಿನ ಪ್ರದೇಶದಲ್ಲೆಲ್ಲ ಇವರ ಪ್ರೇಮ್ ಕಹಾನಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.