ಮಂಗಳೂರು: ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ್ ಅವರಿಗೆ ವಂಚಿಸಲು ಯತ್ನ ನಡೆದಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಿಎ ಎಂದು ಹೇಳಿಕೊಂಡು ವಂಚಕ ಕರೆ ಮಾಡಿದ್ದಾನೆ. ಎರಡು ಬಾರಿ ಮಾಜಿ ಸಚಿವ ಯು.ಟಿ. ಖಾದರ್ ಅವರಿಗೆ ಫೋನ್ ಮಾಡಿದ್ದಾನೆ. ಕರೆ ಸ್ವೀಕರಿಸದ ಕಾರಣಕ್ಕೆ ರಾಹುಲ್ ಗಾಂಧಿ ಪಿಎ ಕಾನಿಷ್ಕ್ ಸಿಂಗ್ ಎಂದು ಮೆಸೇಜ್ ಮಾಡಿ ಹೇಳಿಕೊಂಡಿದ್ದಾನೆ.
ಇದು ನಕಲಿಯಾಗಿದ್ದು, ವಂಚನೆ ಯತ್ನ ಎಂಬುದನ್ನು ತಿಳಿದು ಮಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ ಮಾಜಿ ಯು.ಟಿ. ಖಾದರ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.