alex Certify ಅಯೋಧ್ಯೆಯಲ್ಲಿ ರಾಮಾಯಣ ಕಾಲದ ಸ್ಮಾರಕಗಳ ಮರುಸ್ಥಾಪನೆ; ಯೋಗಿ ಸರ್ಕಾರದ ಮಹತ್ವದ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಯೋಧ್ಯೆಯಲ್ಲಿ ರಾಮಾಯಣ ಕಾಲದ ಸ್ಮಾರಕಗಳ ಮರುಸ್ಥಾಪನೆ; ಯೋಗಿ ಸರ್ಕಾರದ ಮಹತ್ವದ ನಿರ್ಧಾರ

ಐತಿಹಾಸಿಕ ತೀರ್ಪಿನ ಬಳಿಕ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಈ ಹಂತದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವು ಉತ್ತರ ಪ್ರದೇಶದಲ್ಲಿನ ರಾಮಾಯಣ ಕಾಲದ ರಚನೆಗಳು ಮತ್ತು ಸ್ಥಳಗಳನ್ನು ಅಯೋಧ್ಯೆಯಲ್ಲಿ ಸ್ಥಾಪಿಸಲು ಚಿಂತಿಸಿದೆ.

ರಾಮಾಯಣ ಕಾಲದ ರಚನೆಗಳನ್ನು ಗುರುತಿಸಲು ಜಿಲ್ಲೆಯ ಎಲ್ಲಾ ಐತಿಹಾಸಿಕ ಸ್ಥಳಗಳನ್ನು ಸಮೀಕ್ಷೆ ಮಾಡಲು ರಾಜ್ಯ ಸರ್ಕಾರವು ದೆಹಲಿ ಮೂಲದ ವಾಸ್ತುಶಿಲ್ಪಿಯನ್ನು ನೇಮಿಸಿಕೊಂಡಿದೆ. ದೆಹಲಿ ಮೂಲದ ವಾಸ್ತುಶಿಲ್ಪಿ ಅಂತರಾ ಶರ್ಮಾ ಅವರು ತಮ್ಮ ತಂಡದ ಸದಸ್ಯರೊಂದಿಗೆ ಅಯೋಧ್ಯೆಯಲ್ಲಿರುವ ಐತಿಹಾಸಿಕ ಜಲಮೂಲಗಳು, ಮಠಗಳು ಮತ್ತು ದೇವಾಲಯಗಳನ್ನು ಸಮೀಕ್ಷೆ ಮಾಡಿದ್ದಾರೆ.

ಜಿಲ್ಲಾಡಳಿತದ ಅಧಿಕಾರಿಗಳ ಪ್ರಕಾರ, ಈ ಸಮೀಕ್ಷೆಯಲ್ಲಿ 60 ಕ್ಕೂ ಹೆಚ್ಚು ಜಲಮೂಲಗಳು, ದೇವಾಲಯಗಳು ಮತ್ತು ಮಠಗಳನ್ನು ಗುರುತಿಸಲಾಗಿದೆ. ಈ ತಂಡವು ರಾಮಾಯಣ ಕಾಲದ ರಚನೆಗಳ ವಿವರಗಳನ್ನು ಫೇಸ್ ಲಿಫ್ಟ್ ಗಾಗಿ ಸಂಗ್ರಹಿಸಲು ಸ್ಥಳೀಯ ಇತಿಹಾಸಕಾರರ ಸಹಾಯವನ್ನೂ ಪಡೆಯುತ್ತಿದೆ.

ಅಯೋಧ್ಯೆಯ ಪ್ರಾದೇಶಿಕ ಪ್ರವಾಸೋದ್ಯಮ ಅಧಿಕಾರಿ ಆರ್.ಪಿ. ಯಾದವ್ ಪ್ರಕಾರ, ಅಯೋಧ್ಯೆಯ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಲು ಸರ್ಕಾರ ಬಯಸಿದೆ. ಈ ಸಮೀಕ್ಷೆಯ ಮೂಲಕ ಅಂತಹ ಎಲ್ಲಾ ರಚನೆಗಳನ್ನು ಗುರುತಿಸಲಾಗುವುದು ಎಂದು ಅವರು ಹೇಳಿದರು. ಸಮೀಕ್ಷೆಯ ನಂತರ, ಅಯೋಧ್ಯೆ ಆಡಳಿತವು ರಾಜ್ಯ ಸರ್ಕಾರದ ಸೂಚನೆಗಳ ಪ್ರಕಾರ ಕಾರ್ಯನಿರ್ವಹಿಸುತ್ತದೆ ಎಂದು ಅಯೋಧ್ಯಾ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಾಮ ಜನ್ಮಭೂಮಿ ಕ್ಯಾಂಪಸ್‌ನಲ್ಲಿ 11 ಐತಿಹಾಸಿಕ ರಚನೆಗಳನ್ನು ಗುರುತಿಸಿದೆ, ಅವುಗಳನ್ನು ಅವುಗಳ ಮೂಲ ರೂಪದಲ್ಲಿ ಸಂರಕ್ಷಿಸಿ ಪುನಃಸ್ಥಾಪಿಸಲಾಗುತ್ತದೆ.

ಈ 11 ಐತಿಹಾಸಿಕ ಸ್ಥಳಗಳಲ್ಲಿ ಕುಬೇರ್ ತಿಲಾ, ಸೀತಾ ಕೂಪ್, ಸೀತಾ ರಸೋಯಿ ಮತ್ತು ನಲ್, ನೀಲ್, ಅಂಗದ್ ಮತ್ತು ಸುಗ್ರೀವ್ ತಿಲಾ ಸೇರಿವೆ.

ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಪ್ರಕಾರ, ಈ 11 ಸ್ಥಳಗಳನ್ನು ಸಂರಕ್ಷಿಸಿ ಪುನಃಸ್ಥಾಪಿಸಲಾಗುವುದು. ಈ ರಚನೆಗಳ ಮರುಸ್ಥಾಪನೆಗಾಗಿ ತಜ್ಞರನ್ನು ಸಂಪರ್ಕಿಸಲು ಟ್ರಸ್ಟ್ ನಿರ್ಧರಿಸಿದೆ.

“ರಾಮ ಜನ್ಮಭೂಮಿ ಕ್ಯಾಂಪಸ್‌ನಲ್ಲಿ ಹನ್ನೊಂದು ರಚನೆಗಳನ್ನು ಗುರುತಿಸಲಾಗಿದೆ. ಅವೆಲ್ಲವನ್ನೂ ಅವುಗಳ ಮೂಲ ಸ್ವರೂಪಕ್ಕೆ ಮರುಸ್ಥಾಪಿಸಲಾಗುವುದು. ಅವುಗಳ ಮರುಸ್ಥಾಪನೆಗಾಗಿ ಟ್ರಸ್ಟ್ ತಜ್ಞರನ್ನು ನಿಯೋಜಿಸಲಿದೆ” ಎಂದು ಟ್ರಸ್ಟ್ ನ ಸದಸ್ಯ ಅನಿಲ್ ಮಿಶ್ರಾ ಹೇಳಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...