ಭಯಾನಕ ಬೆಳವಣಿಗೆಯೊಂದರಲ್ಲಿ, ಉತ್ತರ ಪ್ರದೇಶದ ಮಹೋಬಾದಲ್ಲಿ ಗರ್ಭಿಣಿ ಮಹಿಳೆಯ ಮೇಲೆ ಜಿಲ್ಲೆಯ ಹೊಲವೊಂದರಲ್ಲಿ ಕಡವೆ ಬೇಟೆಯಾಡುತ್ತಿದ್ದ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ.
ವಂದನಾ ಎಂದು ಗುರುತಿಸಲಾದ 30 ವರ್ಷದ ಸಂತ್ರಸ್ತೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಆಕೆಯ ಹೊಟ್ಟೆಗೆ ಗುಂಡು ಹಾರಿಸಿದ್ದಾರೆ. ಮಹಿಳೆಯನ್ನು ಝಾನ್ಸಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಸಂತ್ರಸ್ತೆ ಮತ್ತು ಆಕೆಯ ಹುಟ್ಟಲಿರುವ ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಐಎಎನ್ಎಸ್ ವರದಿ ಮಾಡಿದೆ. ಸಂತ್ರಸ್ತೆಯ ಪತಿ ಭೂಪೇಂದ್ರ ಸಿಂಗ್ ರಜಪೂತ್ ಈ ಬಗ್ಗೆ ದೂರು ದಾಖಲಿಸಿದ್ದಾರೆ.
ತಾವು ಮತ್ತು ಪತ್ನಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಈ ಗುಂಡು ಹಾರಿದೆ. ಹೊಲದಲ್ಲಿ ತಿರುಗಾಡುವ ಕಡವೆಯ ಬೇಟೆಗೆ ಅವರು ಬಂದಿದ್ದರು. ಗುಂಡು ಹಾರಿದ ತಕ್ಷಣ, ಪತ್ನಿ ಕಿರುಚಿಕೊಂಡಳು. ಹತ್ತಿರ ಹೋಗಿ ನೋಡಿದಾಗ ಆಕೆ ಬಿದ್ದಿದ್ದಳು. ವಿಷಯ ತಿಳಿದು ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಭೂಪೇಂದ್ರ ಆರೋಪಿಸಿದ್ದಾರೆ.