ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಸಾಮಾನ್ಯ ಎನ್ನುವಂತಾಗಿದೆ. ಮೈ ಮೇಲೆ ಸಣ್ಣ ಚುಕ್ಕೆ ಕಾಣಿಸಿಕೊಂಡ್ರೂ ವೈದ್ಯರ ಬಳಿ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.
ಸೂರ್ಯನಿಂದ ಹೊರಸೂಸುವ ಅಲ್ಟ್ರಾ ವೈಲೆಟ್ ಕಿರಣ ಚರ್ಮದ ಡಿ ಎನ್ ಎ ಮೇಲೆ ಹಾನಿ ಮಾಡುವುದರಿಂದ ಟ್ಯಾನಿಂಗ್ ಉಂಟಾಗುತ್ತದೆ.
ಅಧಿಕ ಟ್ಯಾನಿಂಗ್ ಕೂಡ ಕ್ಯಾನ್ಸರ್ ಗೆ ಕಾರಣವಾಗುತ್ತಿದೆ. ಟ್ಯಾನಿಂಗ್ ಹೆಚ್ಚಾದಾಗ ಚರ್ಮದ ಕೋಶಗಳು ಅಸಹಜವಾಗಿ ಕೆಲಸ ಮಾಡಲು ಶುರು ಮಾಡುತ್ತವೆ. ಅಧಿಕ ಹೊತ್ತು ಬಿಸಿಲಿನಲ್ಲಿದ್ದರೂ ಸ್ಕಿನ್ ಕ್ಯಾನ್ಸರ್ ಕಾಡುವ ಸಾಧ್ಯತೆಗಳಿವೆ ಎಂದು ವೈದ್ಯರು ಹೇಳಿದ್ದಾರೆ.