ಮುಂಬೈ; ಹೊಸ ವರ್ಷವನ್ನು ಜನ ತುಂಬಾ ವಿಜ್ರಂಭಣೆಯಿಂದ ಬರಮಾಡಿಕೊಂಡಿದ್ದಾರೆ. ಹಾಡಿ, ಕುಣಿದು ನ್ಯೂ ಇಯರ್ ಸ್ವಾಗತ ಮಾಡಿದ್ದಾರೆ. ಕಳೆದ ಎರಡು ವರ್ಷದಿಂದ ಕೊರೊನಾ ಕಾರ್ಮೋಡ ಇತ್ತು. ಹೀಗಾಗಿ ಸೆಲಿಬ್ರೇಷನ್ ಗೆ ಬ್ರೇಕ್ ಬಿದ್ದಿತ್ತು. ಆದರೆ ಈ ವರ್ಷ ಯಾವುದೇ ರೂಲ್ಸ್ ಇಲ್ಲದೆ ಜನ ನಿರಾತಂಕವಾಗಿ ಹೊಸ ವರ್ಷ ಆಚರಿಸಿದರು.
ಇದರ ಜೊತೆಗೆ ಮತ್ತೊಂದು ವಿಶೇಷ ಅಂದರೆ ಈ ಬಾರಿ ಸ್ವಿಗ್ಗಿಯಿಂದ ದಾಖಲೆ ಮಟ್ಟದಲ್ಲಿ ಪಿಜ್ಜಾ, ಬಿರಿಯಾನಿ ಡೆಲವರಿ ಆಗಿದೆ. ಹೌದು, 3.50 ಲಕ್ಷ ಬಿರಿಯಾನಿ ಆರ್ಡರ್ ಗಳನ್ನು ವಿತರಿಸಿರುವ ಸ್ವಿಗ್ಗಿ ರಾತ್ರಿ 10.25 ರ ಹೊತ್ತಿಗೆ 61,000 ಪಿಜ್ಜಾಗಳನ್ನು ಡೆಲಿವರಿ ಮಾಡಿದೆಯಂತೆ. ಈ ವಿಚಾರವನ್ನು ಸ್ವತಃ ಕಂಪನಿ ಮೂಲಗಳು ತಿಳಿಸಿವೆ. ಇದರ ಜೊತೆಗೆ ಹೈದರಾಬಾದಿನ ಬಿರಿಯಾನಿಗೆ ಹೆಚ್ಚು ಬೇಡಿಕೆ ಬಂದಿತ್ತಂತೆ. ಅಂದರೆ ಶೇಕಡಾ 75.4 ರಷ್ಟು ಆರ್ಡರ್ಗಳು ಈ ಬಿರಿಯಾನಿಗೆ ಬಂದಿವೆ.
ಇನ್ನು, ಡೊಮಿನೋಸ್ ಇಂಡಿಯಾವು ಕೂಡ 61,287 ಪಿಜ್ಜಾಗಳನ್ನು ವಿತರಣೆ ಮಾಡಿದೆ. ಇನ್ನು, ಹೈದರಾಬಾದ್ ನ ಬಿರಿಯಾನಿ ಮಾರಾಟದಲ್ಲೇ ಮೊದಲಿರುವ ರೆಸ್ಟೋರೆಂಟ್ ಗಳಲ್ಲಿ ಒಂದಾದ ಬವಾರ್ಚಿ ರೆಸ್ಟೋರೆಂಟ್ ಒಟ್ಟು 15 ಟನ್ ಬಿರಿಯಾನಿ ಸಿದ್ಧಪಡಿಸಿತ್ತಂತೆ. ಒಟ್ನಲ್ಲಿ ಜನ ಹೊಸ ವರ್ಷವನ್ನು ಬಿರಿಯಾನಿ, ಪಿಜ್ಜಾ ತಿನ್ನುವ ಮೂಲಕವೂ ಆಚರಣೆ ಮಾಡಿದ್ದಾರೆ.