‘ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೆ……’ ಈ ವಿಡಿಯೋ ನೋಡಿ ಬರುವ ಮೊದಲ ಉದ್ಗಾರವಿದು

ನಮ್ಮ ಜೀವನದಲ್ಲಿ ಮೊದಲ ಶ್ರೇಷ್ಠ ರಕ್ಷಕರು ಯಾರು ಎಂದು ಕೇಳಿದರೆ ಕೇಳಿಬರುವ ಹೆಸರೇ ಅಮ್ಮ. ಅಮ್ಮನಿಗಿಂತ ಮಿಗಿಲಾದ ದೇವರು ಇಲ್ಲ ಎನ್ನುತ್ತಾರೆ. ಇದು ಮನುಷ್ಯರಿಗಿಂತಲೂ ಹೆಚ್ಚಾಗಿ ಪ್ರಾಣಿ, ಪಕ್ಷಿಗಳಿಗೆ ಅನ್ವಯ ಆಗುತ್ತದೆ. ಅಂಥ ಒಂದು ಭಾವನಾತ್ಮಕ ವಿಡಿಯೋ ಇದೀಗ ವೈರಲ್​ ಆಗಿದೆ.

ಹಕ್ಕಿಯೊಂದು ತನ್ನ ಮಕ್ಕಳನ್ನು ಟ್ರ್ಯಾಕ್ಟರ್‌ನಿಂದ ರಕ್ಷಿಸುವ ಹಳೆಯ ವಿಡಿಯೋ ಪುನಃ ವೈರಲ್​ ಆಗಿದೆ. ಜೀವನದಲ್ಲಿ, ತಾಯಿಗೆ ಮಕ್ಕಳು ಎಷ್ಟು ಅಗತ್ಯ, ಮಕ್ಕಳಿಗಾಗಿ ತಾಯಿ ಜೀವ ಕೊಡಲೂ ಸಿದ್ಧ ಎನ್ನುವುದನ್ನು ಈ ವಿಡಿಯೋ ಸಾಬೀತು ಮಾಡಿದೆ.

ವಾಲಾ ಅಫ್ಸರ್ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಪಕ್ಷಿಯೊಂದು ತನ್ನ ಮೊಟ್ಟೆಗಳ ಮುಂದೆ ಕುಳಿತಿರುವುದನ್ನು ಕಾಣಬಹುದು. ಟ್ರ್ಯಾಕ್ಟರ್ ಅಲ್ಲಿಗೆ ಬರುತ್ತದೆ. ಅದು ಹಕ್ಕಿಯ ಸಮೀಪ ಹೋಗುತ್ತದೆ.

ಹಕ್ಕಿಯ ಕೆಳಗೆ ಮೊಟ್ಟೆಗಳು ಇವೆ. ತಾಯಿ ಹಕ್ಕಿ ತನ್ನನ್ನು ಟ್ರ್ಯಾಕ್ಟರ್​ನಿಂದ ರಕ್ಷಿಸಿಕೊಳ್ಳಬಹುದಿತ್ತು. ಆದರೆ ಮೊಟ್ಟೆಯ ಮೇಲೆ ಟ್ರ್ಯಾಕ್ಟರ್​ ಹೋಗಬಹುದು ಎನ್ನುವ ಕಾರಣಕ್ಕೆ ಅದು ಅಲ್ಲಿಯೇ ರೆಕ್ಕಿ ಬಿಚ್ಚಿ ಕುಳಿತುಕೊಳ್ಳುತ್ತದೆ. ಟ್ರ್ಯಾಕ್ಟರ್​ ನಿಧಾನಕ್ಕೆ ಹೋಗಿ ಹಕ್ಕಿಯನ್ನು ಕಾಪಾಡುವುದನ್ನು ನೋಡಬಹುದು.

https://twitter.com/ValaAfshar/status/1608834507469357057?ref_src=twsrc%5Etfw%7Ctwcamp%5Etweetembed%7Ctwterm%5E16088

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read