ವಿಟಮಿನ್-ಸಿಯಲ್ಲಿ ಸಮೃದ್ಧವಾಗಿರುವ ಹಣ್ಣು ಕಿವಿ. ಈ ಹಣ್ಣನ್ನು ತಿನ್ನುವುದರಿಂದ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಸಾಮಾನ್ಯವಾಗಿ ಸಲಾಡ್, ಶೇಕ್, ಸ್ಮೂಥಿ ಅಥವಾ ಜ್ಯೂಸ್ಗೆ ನಾವು ಕಿವಿ ಹಣ್ಣನ್ನು ಬಳಸ್ತೇವೆ. ಹಣ್ಣು ಮಾತ್ರವಲ್ಲ ಕಿವಿ ಸಿಪ್ಪೆಗಳು ಕೂಡ ಪೌಷ್ಟಿಕಾಂಶದ ಆಗರವಾಗಿವೆ.
ಕಿವಿ ಸಿಪ್ಪೆಯನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ. ಕಿವಿ ಹಣ್ಣಿನ ಸಿಪ್ಪೆ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ಕಿವಿ ಸಿಪ್ಪೆಯಿಂದ ರುಚಿಕರ ಚಿಪ್ಸ್ ಕೂಡ ಮಾಡಬಹುದು. ಇದು ಗರಿಗರಿಯಾಗಿ ತುಂಬಾನೇ ಟೇಸ್ಟಿಯಾಗಿರುತ್ತದೆ. ಕೇವಲ 10 ನಿಮಿಷದಲ್ಲಿ ಇದನ್ನು ತಯಾರಿಸಬಹುದು.
ಬೇಕಾಗುವ ಸಾಮಗ್ರಿ: ಕಿವಿ ಸಿಪ್ಪೆಗಳು 2 ಕಪ್, ಸ್ವಲ್ಪ ಬೆಣ್ಣೆ, ಅರ್ಧ ಚಮಚ ಚಾಟ್ ಮಸಾಲ.
ತಯಾರಿಸುವ ವಿಧಾನ: ಕಿವಿ ಸಿಪ್ಪೆಯ ಚಿಪ್ಸ್ ಮಾಡಲು ಮೊದಲು ಓವನ್ ಅನ್ನು 200 ಡಿಗ್ರಿ ಸೆಲ್ಸಿಯಸ್ಗೆ ಪ್ರಿಹೀಟ್ ಮಾಡಿಕೊಳ್ಳಿ. ಕಿವಿ ಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಬಟ್ಟೆ ಅಥವಾ ಕಾಗದದ ಮೇಲೆ ಹರಡಿ. ಸಿಪ್ಪೆಗಳು ಚೆನ್ನಾಗಿ ಒಣಗಿದಾಗ ಅದನ್ನು ಬೇಕಿಂಗ್ ಪೇಪರ್ ಮೇಲೆ ಹಾಕಿಕೊಂಡು ಬೆಣ್ಣೆಯಿಂದ ಸಿಪ್ಪೆಗಳ ಮೇಲೆ ಗ್ರೀಸ್ ಮಾಡಿ.
ಪ್ರಿಹೀಟ್ ಮಾಡಿರೋ ಓವನ್ನಲ್ಲಿ ಸುಮಾರು 10 ನಿಮಿಷಗಳ ಕಾಲ ಅದನ್ನು ಇಟ್ಟುಬಿಡಿ. ನಂತರ ಅವುಗಳನ್ನು ಹೊರತೆಗೆದು ಮೇಲಿಂದ ಚಾಟ್ ಮಸಾಲವನ್ನು ಉದುರಿಸಿ. ಕಿವಿ ಸಿಪ್ಪೆಯಿಂದ ಗರಿಗರಿ ಚಿಪ್ಸ್ ಸಿದ್ಧವಾಗುತ್ತದೆ. ಈ ರುಚಿಕರ ಚಿಪ್ಸ್ ಅನ್ನು ಗ್ರೀನ್ ಚಟ್ನಿ ಅಥವಾ ಟೊಮೆಟೊ ಸಾಸ್ ಹಾಗೂ ಬಿಸಿ ಚಹಾದೊಂದಿಗೆ ಸರ್ವ್ ಮಾಡಿ.