ಮಳೆಗಾಲ ಎಂದರೆ ಗಿಜಿಗುಡುವ ವಾತಾವರಣ. ಈ ವೇಳೆ ನಮ್ಮ ಕಾಲುಗಳು ಸಾಮಾನ್ಯವಾಗಿ ಒದ್ದೆಯಾಗೆ ಇರುತ್ತದೆ. ಹೊರಗೆ ಹೆಚ್ಚಾಗಿ ತಿರುಗಾಡುವ ಜನರಿಗಂತೂ ಕಾಲನ್ನು ಶುಚಿಯಾಗಿ ಇಡುವುದು ಸವಾಲಿನ ಕೆಲಸವೇ ಸರಿ.
ಸದಾ ಒದ್ದೆಯಾದ ಕಾಲಿಗೆ ಕೆಸರು ಹುಣ್ಣು ಆಗುವುದು ಸರ್ವೇ ಸಾಮಾನ್ಯ. ಈ ಕಾಡುವ ಕೆಸರು ಹುಣ್ಣಿಗೆ ದುಬಾರಿ ಕ್ರೀಮ್ ಲೇಪಿಸುವ ಅವಶ್ಯಕತೆ ಇಲ್ಲ.
ಮನೆಯಲ್ಲಿ ಸಿಗುವ ಕೇವಲ ಎರಡೇ ವಸ್ತುವಿನಿಂದ ಕೆಸರು ಹುಣ್ಣಿಗೆ ನೀವೇ ಪರಿಹಾರ ಕಂಡುಕೊಳ್ಳಬಹುದು.
ರಾತ್ರಿ ಮಲಗುವ ಮುನ್ನ ನಿಮ್ಮ ಪಾದಗಳನ್ನು ಚೆನ್ನಾಗಿ ತೊಳೆದು ಒರೆಸಿ, ನಂತರ ಎರಡು ಚಮಚ ಶುದ್ಧ ತೆಂಗಿನ ಎಣ್ಣೆಗೆ ಸ್ವಲ್ಪ ಅರಿಶಿನ ಬೆರೆಸಿ ಕಾಲು ಬೆರಳುಗಳ ನಡುವೆ ಹಚ್ಚುತ್ತಾ ಬಂದರೆ ಕೆಸರು ಹುಣ್ಣು ತಂತಾನೇ ಮಾಯವಾಗುತ್ತದೆ.