alex Certify ಭಾರತದಲ್ಲಿ ಸಿಕ್ಕಾಪಟ್ಟೆ ಫೇಮಸ್‌ ಆಗ್ತಿದೆ ಚೀನಾದ ಈ ಹಣ್ಣು; ಇದರ ಪ್ರಯೋಜನ ಕೇಳಿದ್ರೆ ಖರೀದಿಗೆ ಮುಗಿಬೀಳ್ತಾರೆ ಜನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಸಿಕ್ಕಾಪಟ್ಟೆ ಫೇಮಸ್‌ ಆಗ್ತಿದೆ ಚೀನಾದ ಈ ಹಣ್ಣು; ಇದರ ಪ್ರಯೋಜನ ಕೇಳಿದ್ರೆ ಖರೀದಿಗೆ ಮುಗಿಬೀಳ್ತಾರೆ ಜನ…!

ಇತ್ತೀಚಿನ ದಿನಗಳಲ್ಲಿ ಚೀನಾದ ವಿಶಿಷ್ಟ ಬಗೆಯ ಹಣ್ಣು ಭಾರತದ ಮಾರುಕಟ್ಟೆಗಳಲ್ಲಿ ಸಂಚಲನ ಮೂಡಿಸಿದೆ. ಇದನ್ನು ಅಮರ್‌ಫಲ ಎಂದು ಕರೆಯಲಾಗುತ್ತದೆ.

ಇಂಗ್ಲಿಷ್‌ನಲ್ಲಿ ಇದಕ್ಕೆ ಪರ್ಸಿಮನ್‌ ಎಂಬ ಹೆಸರಿದೆ. ಕೃಷಿಕರ ಪ್ರಕಾರ ಈ ಹಣ್ಣಿನ ಮೂಲ ಚೀನಾ. ಹಳದಿ ಟೊಮೆಟೊದಂತೆ ಕಾಣುವ ಈ ಹಣ್ಣು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡಬಲ್ಲದು. ಭಾರತೀಯ ಮಾರುಕಟ್ಟೆಗಳಲ್ಲಿ ಇದರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಚಳಿಗಾಲದಲ್ಲಿ ಇದನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ಅನೇಕ ರೀತಿಯ ಸಾಂಕ್ರಾಮಿಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಇದರಲ್ಲಿರುವ ಇತರ ಪೋಷಕಾಂಶಗಳು ದೇಹವನ್ನು ಕಾಯಿಲೆಗಳಿಂದ ದೂರವಿಡುತ್ತವೆ.

ಅಮರ್‌ಫಲವನ್ನೇಕೆ ಸೇವಿಸಬೇಕು?

ಇದನ್ನು ಸೂಪರ್‌ಫುಡ್‌ಗಳ ಪಟ್ಟಿಯಲ್ಲಿ ಸೇರಿಸಬಹುದು. ಇದು ವಿಟಮಿನ್ ಇ, ಕೆ, ಬಿ1, ಬಿ2, ಬಿ6, ಫೋಲೇಟ್, ಪೊಟ್ಯಾಸಿಯಮ್, ತಾಮ್ರ ಮತ್ತು ಇತರ ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದೆ. ಇದರಲ್ಲಿ ಮೆಗ್ನೀಸಿಯಮ್, ಫಾಸ್ಫರಸ್ ಮತ್ತು ಮ್ಯಾಂಗನೀಸ್ ಕೂಡ ಹೇರಳವಾಗಿ ಕಂಡುಬರುತ್ತದೆ.

ಅಮರ್‌ಫಲದಲ್ಲಿರುವ ಎಂಟಿಒಕ್ಸಿಡೆಂಟ್‌ಗಳು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತವೆ ಮತ್ತು ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಇದು ಕಾಲೋಚಿತ ರೋಗಗಳ ವಿರುದ್ಧ ಪರಿಣಾಮವನ್ನು ತೋರಿಸುತ್ತದೆ ಮತ್ತು ದೇಹವನ್ನು ಆರೋಗ್ಯಕರವಾಗಿರಿಸುತ್ತದೆ.

ಚೀನಾದ ಈ ಹಣ್ಣಿನಲ್ಲಿರೋ ಎಂಟಿಒಕ್ಸಿಡೆಂಟ್‌ಗಳು, ಫ್ಲೇವನಾಯ್ಡ್‌ಗಳು ಮತ್ತು ಕ್ವೆರ್ಸೆಟಿನ್ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತವೆ. ಈ ಹಣ್ಣು ಮಲ್ಟಿವಿಟಮಿನ್‌ಗಳ ಉತ್ತಮ ಮೂಲವಾಗಿದೆ. ಚಳಿಗಾಲದಲ್ಲಿ ದೈಹಿಕ ಕೆಲಸದ ಕೊರತೆಯಿಂದಾಗಿ, ತೂಕ ಹೆಚ್ಚಾಗುತ್ತದೆ.  ಆದರೆ ಈ ಹಣ್ಣನ್ನು ಸೇವಿಸುವುದರಿಂದ ನಿಮಗೆ ಹೆಚ್ಚು ಹಸಿವಾಗುವುದಿಲ್ಲ. ಪರಿಣಾಮ ನೀವು ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು. ಅಷ್ಟೇ ಅಲ್ಲ ಅಮರ್‌ಫಲ ರಕ್ತದೊತ್ತಡದ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...