ವೃತ್ತಿ ಜೀವನದಲ್ಲಿ ಯಶಸ್ಸನ್ನು ಪಡೆಯಬೇಕೆ ಅಥವಾ ಲೌಕಿಕ ಜೀವನದಲ್ಲಿ ಸುಖ ಪಡೆಯಬೇಕು ಅಂದ್ರೆ ಚಾಣಕ್ಯ ನೀತಿಯನ್ನು ಪಾಲನೆ ಮಾಡಬೇಕು. ಚಾಣಕ್ಯ ನೀತಿಯಲ್ಲಿ ಅನೇಕ ಪರಿಹಾರಗಳನ್ನು ಹೇಳಲಾಗಿದೆ. ಈಗ್ಲೂ ಚಾಣಕ್ಯ ನೀತಿ ತುಂಬ ಪ್ರಸ್ತುತವಾಗಿದೆ. ಆಚಾರ್ಯ ಚಾಣಕ್ಯ ಈ ನೀತಿಗಳನ್ನು ಬಳಸಿ ಚಂದ್ರಗುಪ್ತ ಅಖಂಡ ಭಾರತದ ಚಕ್ರವರ್ತಿಯಾಗಿದ್ದ. ಮಾನವ ಕಲ್ಯಾಣ ಮತ್ತು ಜೀವನಕ್ಕಾಗಿ ಈ ನೀತಿಶಾಸ್ತ್ರದಲ್ಲಿ ಅನೇಕ ವಿಷಯಗಳನ್ನು ಉಲ್ಲೇಖಿಸಲಾಗಿದೆ.
ಆಚಾರ್ಯ ಚಾಣಕ್ಯ, ಒಬ್ಬ ವ್ಯಕ್ತಿ ಯಾವಾಗಲೂ ಕೆಲ ವಿಷ್ಯಗಳನ್ನು ತನ್ನ ಸ್ನೇಹಿತರು ಮತ್ತು ಸಹೋದರರ ಮುಂದೆ ಹೇಳಬಾರದು ಎಂದಿದ್ದಾರೆ.
ಆಚಾರ್ಯ ಚಾಣಕ್ಯ ಪ್ರಕಾರ, ವೈವಾಹಿಕ ಜೀವನಕ್ಕೆ ಸಂಬಂಧಿಸಿದ ವಿಷಯಗಳು ಯಾವಾಗಲೂ ಗೌಪ್ಯವಾಗಿರಬೇಕು. ಈ ವಿಷಯಗಳನ್ನು ಎಂದಿಗೂ ಮೂರನೇ ವ್ಯಕ್ತಿಯ ಮುಂದೆ ಚರ್ಚಿಸಬಾರದು. ಇದ್ರಲ್ಲಿ ಕೆಲ ವಿಷ್ಯಗಳು ಆಪ್ತರಿಗೆ ತಿಳಿದ್ರೆ ಅವರು ಅದರ ಲಾಭ ಪಡೆಯಬಹುದು. ಇದ್ರಿಂದ ವೈವಾಹಿಕ ಜೀವನದಲ್ಲಿ ಬಿರುಕು ಮೂಡುತ್ತದೆ ಎನ್ನುತ್ತಾರೆ ಚಾಣಕ್ಯ.
ಆಚಾರ್ಯ ಚಾಣಕ್ಯ ಪ್ರಕಾರ, ಜನರು ತಮ್ಮ ಹಣ ಗಳಿಸುವ ಮೂಲಗಳು ಮತ್ತು ನಿಜವಾದ ಆರ್ಥಿಕ ಸ್ಥಿತಿಯ ಬಗ್ಗೆ ಹೇಳಬಾರದು. ಇತರರ ಮುಂದೆ ಹಣದ ಬಗ್ಗೆ ಚರ್ಚಿಸುವುದು ನಿಮ್ಮ ಜೀವನವನ್ನು ಅಪಾಯಕ್ಕೆ ತಳ್ಳಬಹುದು. ಒಬ್ಬ ವ್ಯಕ್ತಿ ತನ್ನ ಗಳಿಕೆ ಮತ್ತು ಸಾಲಗಳ ಮಾಹಿತಿಯನ್ನು ಯಾವಾಗಲೂ ಗುಪ್ತವಾಗಿಡಬೇಕು. ನಿಮ್ಮ ಸಂಪತ್ತಿನ ಬಗ್ಗೆ ಮಾಹಿತಿ ಪಡೆದಾಗ, ನಿಮ್ಮ ಸಹೋದರ ಕೂಡ ನಿಮ್ಮ ಶತ್ರುವಾಗಬಹುದು ಎನ್ನುತ್ತಾರೆ ಚಾಣಕ್ಯ.
ಜನರು ತಮಗೆ ಆಗಿರುವ ಮೋಸದ ಬಗ್ಗೆ ಯಾರಿಗೂ ಹೇಳಬಾರದು. ಅಂತಹ ವಿಷಯಗಳನ್ನು ಕುಟುಂಬ ಸದಸ್ಯರ ಮುಂದೆ ಮಾತ್ರ ಹೇಳಬೇಕು. ಹೊರಗಿನವರಿಗೆ ಈ ವಿಷಯ ತಿಳಿದರೆ, ಅವರು ನಿಮ್ಮ ಸಾಮರ್ಥ್ಯವನ್ನು ಪ್ರಶ್ನಿಸಬಹುದು. ನಿಮ್ಮನ್ನು ಹೀನವಾಗಿ ನೋಡಬಹುದು. ನಿಮಗೆ ಮೋಸ ಮಾಡಲು ಪ್ರಯತ್ನಿಸಬಹುದು ಎನ್ನುತ್ತಾರೆ ಚಾಣಕ್ಯ.