ಏನೇ ಬಂದ್ರೂ ಅದು ದೇವರ ಅನುಗ್ರಹದಿಂದ ಎನ್ನುತ್ತಾರೆ. ದೇವರ ಮನೆಯಲ್ಲಿ ದೀಪ ಬೆಳಗ್ತಾರೆ. ಪ್ರಕಾಶಮಾನವಾಗಿರುವ ದೀಪ ಕೂಡ ದೇವರ ಸ್ವರೂಪವಾಗಿರುತ್ತದೆ. ಕೇವಲ ದೇವರ ಮನೆಯಲ್ಲಿ ದೀಪ ಬೆಳಗಿದ್ರೆ ಸಾಲದು, ದೀಪ ಬೆಳಗಲು ಕೆಲವು ನಿಯಮಗಳಿವೆ. ಅದ್ರಲ್ಲೂ ದೀಪದ ಜ್ವಾಲೆ ಯಾವ ದಿಕ್ಕಿನಲ್ಲಿದೆ ಎಂಬುದು ಮಹತ್ವ ಪಡೆಯುತ್ತದೆ.
ಮನೆಯ ಸಮೃದ್ಧಿ ಹಾಗೂ ಪ್ರಗತಿಗಾಗಿ ಪ್ರತಿದಿನ ಮನೆಯಲ್ಲಿ ತುಪ್ಪದ ದೀಪ ಬೆಳಗಬೇಕು. ಇದು ಮನೆಯಲ್ಲಿ ಧನಾತ್ಮಕ ಅಂಶವನ್ನು ವೃದ್ಧಿ ಮಾಡುತ್ತದೆ.
ದೀಪದ ಜ್ವಾಲೆಗಳು ಪೂರ್ವದ ಕಡೆಗಿದ್ದರೆ ರೋಗಗಳು ಬರುವುದಿಲ್ಲ. ಆಯಸ್ಸು ವೃದ್ಧಿಯಾಗುತ್ತದೆ.
ದೀಪವನ್ನು ಉತ್ತರ ದಿಕ್ಕಿನಲ್ಲಿಟ್ಟರೆ ಆರ್ಥಿಕ ಅಭಿವೃದ್ಧಿಯಾಗುತ್ತದೆ.
ಅಡುಗೆ ಮನೆಯಲ್ಲಿ ಕುಡಿಯುವ ನೀರಿನ ಪಕ್ಕದಲ್ಲಿ ತುಪ್ಪದ ದೀಪ ಹಚ್ಚಿಡಬೇಕು. ಇದರಿಂದ ಆರೋಗ್ಯ ವೃದ್ಧಿ ಹಾಗೂ ಧನವೃದ್ಧಿಯಾಗುತ್ತದೆ. ದುಷ್ಟ ಶಕ್ತಿಗಳ ಪರಿಣಾಮ ಕಡಿಮೆಯಾಗುತ್ತದೆ.