ಕಾಲಿನ ಪಾದಗಳು ಕೆಲವೊಮ್ಮೆ ವಿಪರೀತ ಉರಿದು ಕಿರಿಕಿರಿ ಮಾಡುತ್ತವೆ. ದೇಹದ ಉಷ್ಣತೆ ಹೆಚ್ಚಿರುವುದು ಇದಕ್ಕೆ ಮುಖ್ಯ ಕಾರಣ. ಇದರ ಪರಿಹಾರಕ್ಕೆ ಪಾನೀಯವೊಂದನ್ನು ತಯಾರಿಸುವ ಬಗೆ ನೋಡೋಣ.
ಒಂದು ಪಾತ್ರೆಗೆ ಎರಡು ಚಮಚ ಕೊತ್ತಂಬರಿ ಕಾಳು ಹಾಗೂ ಜೀರಿಗೆಯನ್ನು ಹಾಕಿ ಎರಡು ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ. ತಣ್ಣಗಾದ ಬಳಿಕ ಮಿಕ್ಸಿಯಲ್ಲಿ ರುಬ್ಬಿ.
ಕೊತ್ತಂಬರಿ ಬೀಜ ದೇಹದ ಆಂತರಿಕ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಜೀರಿಗೆ ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಈ ಪುಡಿಯನ್ನು ಏರ್ ಟೈಟ್ ಕಂಟೇನರ್ ನಲ್ಲಿ ಶೇಖರಣೆ ಮಾಡಿ ಇಟ್ಟುಕೊಳ್ಳಿ. ಇದನ್ನು ಒಂದು ಲೋಟ ನೀರಿಗೆ ಹಾಕಿ ಅರ್ಧ ಲೋಟ ಅಗುವ ತನಕ ಕುದಿಸಿ. ನಂತರ ಸೋಸಿ. ಕಾಲು ಪಾದ ಕೈಗಳ ಉರಿ ಇದ್ದವರು ಮಾತ್ರವಲ್ಲದೆ ಅಜೀರ್ಣತೆ ಸಮಸ್ಯೆಯಿರುವವರೂ ಇದನ್ನು ಸೇವನೆ ಮಾಡಬಹುದು.
ಈ ಡ್ರಿಂಕ್ ಗೆ ಸ್ವಲ್ಪ ಕೆಂಪು ಕಲ್ಲು ಸಕ್ಕರೆಯನ್ನು ಹಾಕಿಕೊಳ್ಳಬಹುದು. ಇದನ್ನು ಬೆಳಿಗ್ಗೆ ಮತ್ತು ರಾತ್ರಿ ಒಂದು ಬಾರಿ ಊಟದ ಬಳಿಕ ಸೇವನೆ ಮಾಡಿದರೆ ಸಾಕು. ನಿಮ್ಮ ಸಮಸ್ಯೆಗಳು ದೂರವಾಗುತ್ತವೆ.