ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿಯುವ ಅಭ್ಯಾಸವನ್ನು ಮಕ್ಕಳಿಗೆ ಹೇಳಿ ಕೊಡುತ್ತೇವೆ. ಇದರ ಹಿಂದಿರುವ ಕಾರಣ ನಿಮಗೆ ಗೊತ್ತೇ… ಹಾಲಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಎ, ವಿಟಮಿನ್ ಬಿ ಮೊದಲಾದ ಪೋಷಕಾಂಶಗಳು ಹೇರಳವಾಗಿದ್ದು ಇದು ಪರಿಪೂರ್ಣವಾದ ಮತ್ತು ಆರೋಗ್ಯಕರ ಪಾನೀಯವಾಗಿದೆ.
ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದು ಒಳ್ಳೆಯದು. ಏಕೆಂದರೆ ಆರೋಗ್ಯ ತಜ್ಞರ ಪ್ರಕಾರ ಇದರಲ್ಲಿರುವ ಟ್ರಿಕ್ಟೋಪ್ಯಾನ್ ಎಂಬ ಪೋಷಕಾಂಶ ಜೀರ್ಣ ಕ್ರಿಯೆ ಬಳಿಕ ಸೇರೋಟೋನಿನ್ ಎಂಬ ರಸದೂತವಾಗಿ ಪರಿವರ್ತನೆ ಆಗುತ್ತದೆ. ಸೊಂಪಾದ ನಿದ್ದೆಗೆ ಈ ರಸದೂತ ತುಂಬಾ ಅವಶ್ಯಕ. ಅದರಲ್ಲೂ ಹಾಲು ಸ್ವಲ್ಪ ಬಿಸಿ ಇರುವಾಗ ನಾವು ಸೇವನೆ ಮಾಡುವುದರಿಂದ ಮಾನಸಿಕವಾಗಿ ನಿರಾಳತೆ ಸಿಗುತ್ತದೆ.
ಹಾಲಿನಲ್ಲಿರುವ ಕಾರ್ಬೋಹೈಡ್ರೇಟ್ ಮತ್ತು ಆರೋಗ್ಯಕರ ಕೊಬ್ಬುಗಳು ದೇಹದಲ್ಲಿ ಇರುವ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಮಕ್ಕಳ ಬೆಳವಣಿಗೆಗೆ ಹಾಲು ಹೆಚ್ಚಿನ ನೆರವು ನೀಡುತ್ತದೆ.