ತಮ್ಮ ಮಕ್ಕಳು, ಓದು ಹಾಗೂ ಇತರೆ ಚಟುವಟಿಕೆಯಲ್ಲಿ ಬುದ್ಧಿವಂತರಾಗಬೇಕು ಎಂಬುದು ಎಲ್ಲಾ ತಂದೆ-ತಾಯಿಯ ಆಸೆ. ಆದರೆ ಕೆಲವು ಮಕ್ಕಳಿಗೆ ಎಷ್ಟೇ ಓದಿದರೂ ತಲೆಗೆ ಹತ್ತುವುದಿಲ್ಲ.
ಇದರಿಂದ ಅವರಲ್ಲಿನ ಆತ್ಮವಿಶ್ವಾಸ ಕಡಿಮೆಯಾಗಿ ಯಾವುದೇ ವಿಷಯದಲ್ಲೂ ಆಸಕ್ತಿ ಇಲ್ಲದಂತಾಗುತ್ತದೆ. ಇಂತಹ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸಲು ಈ ಟಿಪ್ಸ್ ಫಾಲೋ ಮಾಡಿ ನೋಡಿ.
*ಬ್ಲಾಕ್ ಬೇರಿಸ್: ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಜಾಸ್ತಿ ಇದೆ. ಇದು ದೇಹ ಮತ್ತು ಮೆದುಳಿನ ನಡುವಿನ ಸಂಭಾಷಣೆಗೆ ಸಹಾಯ ಮಾಡುತ್ತದೆ. ಇದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ.
*ಸೇಬು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೇ ಇದರಲ್ಲಿನ ಕ್ಯೂರಸೆಟಿನ್ ಮೆದುಳಿನ ಜೀವಕೋಶಗಳು ಹಾಳಾಗದಂತೆ ಕಾಪಾಡುತ್ತದೆ. ಮೆರವಿನ ಸಮಸ್ಯೆಯನ್ನು ನಿವಾರಿಸುತ್ತದೆ.
* ಮೊಟ್ಟೆಯಲ್ಲಿ ಪ್ರೋಟಿನ್ ಹೆಚ್ಚಿರುತ್ತದೆ. ಇದು ಬೆಳೆಯುವ ಮಕ್ಕಳಿಗೆ ಅಗತ್ಯ. ಹಾಗೇ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.
*ತರಕಾರಿಗಳಲ್ಲಿ ಆ್ಯಂಟಿ ಆಕ್ಸಿಡೆಂಟ್ ಹೇರಳವಾಗಿರುತ್ತದೆ. ಇದು ಮೆದುಳಿನ ಜೀವಕೋಶಗಳನ್ನು ಆರೋಗ್ಯಕರವಾಗಿರಿಸುತ್ತದ, ಆಲೂಗಡ್ಡೆ, ಕುಂಬಳಕಾಯಿ, ಕ್ಯಾರೆಟ್, ಸಿಹಿ ಗೆಣಸು ಇವು ಮಕ್ಕಳ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
*ಪಾಲಾಕ್: ಇದರಲ್ಲಿ ವಿಟಮಿನ್ ಕೆ ಹೇರಳವಾಗಿದೆ. ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮರೆವಿನ ಸಮಸ್ಯೆ ನಿವಾರಣೆಗೆ ಇದು ಸೂಕ್ತವಾದದ್ದು.
* ಮೀನಿನಲ್ಲಿ ಓಮೇಗಾ -3 ಫ್ಯಾಟಿ ಆ್ಯಸಿಡ್ ಹೆಚ್ಚಿರುತ್ತದೆ. ಇದು ಮಕ್ಕಳ ಮೆದುಳಿನ ಬೆಳವಣಿಗೆಗೆ ಅಗತ್ಯವಾಗಿರುತ್ತದೆ. ಹಾಗೇ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ.