ಲೈಂಗಿಕ ಜೀವನದಿಂದ ಸಂಗಾತಿ ದೂರವಾಗ್ತಿದ್ದಾರೆ. ಲೈಂಗಿಕ ಜೀವನದಲ್ಲಿ ಇಬ್ಬರೂ ಆಸಕ್ತಿ ಕಳೆದುಕೊಳ್ಳುತ್ತಿದ್ದೀರೆಂದಾದಲ್ಲಿ ನಿಮ್ಮ ಡಯಟ್ ಬದಲಾಯಿಸಿ. ಲವ್ ಫುಡ್ ಸೇವನೆ ಶುರುಮಾಡಿ. ಚಳಿಗಾಲದಲ್ಲಿ ಇಬ್ಬರು ಮತ್ತಷ್ಟು ಹತ್ತಿರವಾಗಿ.
ಲೈಂಗಿಕ ಆಸಕ್ತಿ ಹೆಚ್ಚಿಸುವ ಆಹಾರವನ್ನು ಲವ್ ಫುಡ್ ಎಂದು ಕರೆಯುತ್ತಾರೆ. ಚಾಕೋಲೇಟ್, ವೆನಿಲಾ, ಕೆಂಪು ವೈನ್ ಇದೆಲ್ಲ ಲವ್ ಫುಡ್ ಎಂದೇ ಹೆಸರಾಗಿರುವ ಆಹಾರಗಳು. ಆದ್ರೆ ಇದನ್ನು ಹೊರತುಪಡಿಸಿ ಅಡುಗೆ ಮನೆಯಲ್ಲಿಯೇ ಲೈಂಗಿಕ ಆಸಕ್ತಿ ಹೆಚ್ಚಿಸುವ ಆಹಾರಗಳಿವೆ.
ಕ್ಯಾರೆಟ್ ನಲ್ಲಿ ವಿಟಮಿನ್ ಎ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ವೀರ್ಯಾಣುವನ್ನು ಹೆಚ್ಚಿಸುತ್ತದೆ. ಕ್ಯಾರೆಟ್ ತಿನ್ನುವ ಪುರುಷರು ಮಹಿಳೆಯರಿಗೆ ಹೆಚ್ಚು ಆಕರ್ಷಕವಾಗಿ ಕಾಣ್ತಾರೆಂದು ಸಂಶೋಧನೆಯೇ ಹೇಳಿದೆ.
ಬೆಳ್ಳುಳ್ಳಿಯಲ್ಲಿಯೂ ಕಾಮಪ್ರಚೋದನೆ ಗುಣವಿರುತ್ತದೆ. ಇದು ರಕ್ತದ ಹರಿವನ್ನು ಆರೋಗ್ಯವಾಗಿಡುತ್ತದೆ. ಇದ್ರ ಜೊತೆಗೆ ಈರುಳ್ಳಿ ಕೂಡ ಲೈಂಗಿಕ ಅಂಗಗಳ ಆರೋಗ್ಯವನ್ನು ಸುಧಾರಿಸುತ್ತದೆ. ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ. ಆದ್ರೆ ಅತಿಯಾದ ಸೇವನೆ ಒಳ್ಳೆಯದಲ್ಲ.
ಬೀಟ್ರೋಟ್ ನಲ್ಲಿ ನೈಟ್ರೇಟ್ ಅಂಶವಿರುತ್ತದೆ. ಇದು ಜನನಾಂಗದಲ್ಲಿ ರಕ್ತದ ಹರಿವನ್ನು ಹೆಚ್ಚಿಸಿ ಕಾಮಾಸಕ್ತಿಯನ್ನು ಜಾಸ್ತಿ ಮಾಡುತ್ತದೆ. ಹಾರ್ಮೋನುಗಳನ್ನು ಸಮತೋಲನದಲ್ಲಿಡುವ ಕೆಲಸವನ್ನೂ ಮಾಡುತ್ತದೆ.
ಬೆಂಡೆಕಾಯಿಯಲ್ಲಿ ವಿಟಮಿನ್ ಹಾಗೂ ಸತುವಿನ ಪ್ರಮಾಣ ಹೆಚ್ಚಿರುತ್ತದೆ. ಲೈಂಗಿಕ ಸಮಸ್ಯೆಯನ್ನು ಇದು ನಿವಾರಿಸುವ ಗುಣ ಹೊಂದಿದೆ.
ಒಂದು ಬೌಲ್ ಪಾಲಕ್ ಸೂಪ್ ಸೇವನೆಯಿಂದ ಕಾಮಪ್ರಚೋದನೆ ಹೆಚ್ಚಾಗುತ್ತದೆ. ಲೈಂಗಿಕ ಸಂಭೋಗಕ್ಕೆ ಸಂಬಂಧಿಸಿದ ಅಂಗಗಳ ರಕ್ತದ ಹರಿವಿಗೆ ಇದು ಸಹಕಾರಿ.