ಸೆಲ್ಫಿ ತೆಗೆಯುವವರು ಎಲ್ಲವೂ ಪರ್ಫೆಕ್ಟ್ ಆಗಿರಬೇಕೆಂದರೆ ಫೋಟೋಗ್ರಫಿ ಬಗ್ಗೆಯೂ ಹೆಚ್ಚು ಗಮನ ನೀಡಬೇಕಾಗುತ್ತದೆ.
ಪಾರ್ಟಿ ಎಂಜಾಯ್ ಮಾಡಿದ ಫೋಟೋ ಚೆನ್ನಾಗಿ ಬರಲಿಲ್ಲವೆಂದ್ರೆ ಮೂಡ್ ಹಾಳಾಗೋದು ನಿಶ್ಚಿತ. ಹಾಗಾಗಿ ಸೆಲ್ಫಿ ತೆಗೆಯುವ ಮುನ್ನ ಕೆಲವೊಂದು ವಿಷ್ಯದ ಬಗ್ಗೆ ಗಮನವಿರಲಿ.
ಸೆಲ್ಫಿ ತೆಗೆಯುವ ವೇಳೆ ನಿಮ್ಮನ್ನು ಕೇಂದ್ರವಾಗಿಟ್ಟುಕೊಳ್ಳುವ ಬದಲು ಬಲ ಅಥವಾ ಎಡಕ್ಕೆ ನೀವು ಬರುವಂತೆ ನೋಡಿಕೊಳ್ಳಿ. ಸೆಲ್ಫಿ ತೆಗೆಯುವ ವೇಳೆ ಕೈ ಅಥವಾ ಸ್ಟಿಕ್ ಮಧ್ಯದಲ್ಲಿಡಬೇಡಿ. ಇದ್ರಿಂದ ಸೆಲ್ಫಿ ಸುಂದರವಾಗಿ ಬರುವುದಿಲ್ಲ. ಸಂಭ್ರಮಾಚರಣೆಗೂ ಮುನ್ನ ಸೆಲ್ಫಿ ತೆಗೆದು ಅಭ್ಯಾಸ ಮಾಡಿಕೊಳ್ಳಿ. ಆಗ ಯಾವ ಫೋಸ್ ನಲ್ಲಿ ನೀವು ಚೆನ್ನಾಗಿ ಬರ್ತಿರಾ ಎಂಬುದು ನಿಮಗೆ ಗೊತ್ತಾಗುತ್ತದೆ.
ಸೆಲ್ಫಿ ತೆಗೆಯುವ ವೇಳೆ ಬೆಳಕಿನ ಬಗ್ಗೆ ಗಮನವಿರಲಿ. ಬೆಳಕು ಹೆಚ್ಚಾದಲ್ಲಿ ಫೋಟೋ ಚೆನ್ನಾಗಿ ಬರುವುದಿಲ್ಲ. ನೇರವಾಗಿ ಕ್ಯಾಮರಾ ನೋಡಿ ಫೋಟೋ ತೆಗೆಯಬೇಡಿ. ನ್ಯಾಚುರಲ್ ಆಗಿದ್ದು ಫೋಸ್ ಕೊಡಿ.