ಪಿತೃಪಕ್ಷ ನಡೆಯುತ್ತಿದೆ. ಮನೆಯಲ್ಲಿ ಮೃತರಾದ ಪ್ರತಿಯೊಬ್ಬ ಹಿರಿಯರ ಆತ್ಮಕ್ಕೆ ಶಾಂತಿ ನೀಡಿ, ಅವರನ್ನು ತೃಪ್ತಿಗೊಳಿಸುವ ಕಾರ್ಯವನ್ನು ಕಿರಿಯರಾದವರು ಮಾಡ್ತಾರೆ. ಪಿತೃಗಳಿಗೆ ಪಿಂಡ ದಾನ ಮಾಡಿ, ಎಡೆಯಿಟ್ಟು ಶ್ರಾದ್ಧ ಮಾಡುವ ಪದ್ಧತಿಯೂ ಹಿಂದು ಧರ್ಮದಲ್ಲಿದೆ.
ಆತ್ಮಗಳಿಗೆ ಶಾಂತಿಗಾಗಿ ಶ್ರಾದ್ಧ ಮಾಡುವುದೊಂದೇ ಪಿತೃಪಕ್ಷದ ವಿಶೇಷವಲ್ಲ. ಪಿತೃಪಕ್ಷದಲ್ಲಿ ಮಹಾಲಕ್ಷ್ಮಿ ಪೂಜೆಯನ್ನು ಮಾಡಿದ್ರೆ ಒಳ್ಳೆಯದು. ಮಹಾಲಕ್ಷ್ಮಿ ಸಂತೋಷಗೊಂಡ್ರೆ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಪಿತೃಪಕ್ಷದಲ್ಲಿ ಮಹಾಲಕ್ಷ್ಮಿಯ ಆಶೀರ್ವಾದ ಪಡೆಯುವುದು ಬಹಳ ಮುಖ್ಯ.
ಮನೆಯ ಮಗಳನ್ನು ಮಹಾಲಕ್ಷ್ಮಿಗೆ ಹೋಲಿಸಲಾಗುತ್ತದೆ. ಹೆಣ್ಣು ಮಗಳು ಜನಿಸಿದ್ರೆ ನಮ್ಮ ಮನೆಗೆ ಮಹಾಲಕ್ಷ್ಮಿ ಬಂದ್ಲು ಎನ್ನುತ್ತಾರೆ. ಹಿಂದು ಧರ್ಮದ ಪ್ರಕಾರ, ಮನೆಯಲ್ಲಿರುವ ಮಗಳಿಗೆ ವಾರದ ಪ್ರತಿಯೊಂದು ದಿನವೂ ವಿಶೇಷ ಭೋಜನ ಮಾಡಿಸುವುದರಿಂದ ಮಹಾಲಕ್ಷ್ಮಿ ಪ್ರಸನ್ನಳಾಗ್ತಾಳಂತೆ.
ಶನಿವಾರ ಬಾದಾಮಿ ಹಲ್ವಾ ಮಾಡಿ ತಿನ್ನಿಸಿ.
ಭಾನುವಾರ ಜೇನುತುಪ್ಪ ಬೆರೆಸಿದ ಆಹಾರ ನೀಡಿ.
ಸೋಮವಾರ ಅಕ್ಕಿ ಪಾಯಸ ಮಾಡಿದ್ರೆ ಒಳ್ಳೆಯದು.
ಮಂಗಳವಾರ ಜಾಂಗೀರ್ ನೀಡಿ.
ಬುಧವಾರ ಸಬ್ಬಕ್ಕಿ ಪಾಯಸ ಬಡಿಸಿ.
ಗುರುವಾರ ಕಡಲೆ ಹಿಟ್ಟಿನ ಹಲ್ವಾ ಮಾಡಿ.
ಶುಕ್ರವಾರ ಪಾಯಸ ಉಣಿಸುವುದು ಒಳ್ಳೆಯದು.
ಮನೆಯಲ್ಲಿ ಯಾವುದೇ ಹುಡುಗಿ ಇಲ್ಲವಾದ್ರೆ, ವಿವಾಹಿತ ಬ್ರಾಹ್ಮಣ ಮಹಿಳೆಗೆ ಕಳಶ, ಹೂ, ಸುಗಂಧ, ಸಕ್ಕರೆ, ತುಪ್ಪ ದಾನ ಮಾಡಿ. ಇಲ್ಲವಾದ್ರೆ ಯಾವುದಾದ್ರೂ ಕನ್ಯೆಗೆ ತೆಂಗಿನ ಕಾಯಿ, ಸಕ್ಕರೆ ನೀಡಿ.