ಸುಕ್ಕು, ಕಲೆ ಇಲ್ಲದ ಶುದ್ಧವಾದ ತ್ವಚೆ ನಮ್ಮದಾಗಬೇಕು ಅನ್ನೋ ಆಸೆ ಸಹಜ. ಚರ್ಮದ ಮೇಳೆ ಕಲೆಗಳಿಲ್ಲದೇ ಶುಭ್ರವಾಗಿದ್ದರೆ ಮುಖವೂ ಹೊಳೆಯುತ್ತಿರುತ್ತದೆ. ಮುಖದ ಮೇಲೆ ಕಲೆಗಳಿವೆ ಅಂದಾಕ್ಷಣ ಅದನ್ನು ಮೇಕಪ್‌ನಿಂದ ಮುಚ್ಚಿಹಾಕಲು ಎಲ್ಲರೂ ಪ್ರಯತ್ನಿಸ್ತಾರೆ. ಹಾಗೆ ಮಾಡುವ ಬದಲು ಕಲೆಗಳನ್ನು ಶಾಶ್ವತವಾಗಿ ಹೋಗಲಾಡಿಸುವ ಕ್ರಮಗಳನ್ನು ಅನುಸರಿಸಬೇಕು. ಇದಕ್ಕೆ ಕೆಲವೊಂದು ಮನೆಮದ್ದುಗಳು ಸಹ ಇವೆ.
ಈರುಳ್ಳಿ ರಸ: ಈರುಳ್ಳಿ ರಸವು ಮುಖದ ಕಲೆಗಳನ್ನು ಹೋಗಲಾಡಿಸಲು ಪ್ರಯೋಜನಕಾರಿಯಾಗಿದೆ. ಈರುಳ್ಳಿಯನ್ನು ತುರಿದು ಅದರ ರಸವನ್ನು ಹಿಂಡಿ ತೆಗೆಯಿರಿ. ಹತ್ತಿಯ ಸಹಾಯದಿಂದ ಅದನ್ನು ಕಲೆಗಳ ಮೇಲೆ ಹಚ್ಚಿಕೊಳ್ಳಿ. 20 ನಿಮಿಷ ಹಾಗೇ ಬಿಡಿ. ನಂತರ ಶುದ್ಧವಾದ ನೀರಿನಿಂದ ತೊಳೆದುಕೊಳ್ಳಿ.
ನೆಲ್ಲಿಕಾಯಿ: ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಕಂಡುಬರುತ್ತದೆ. ವಿಟಮಿನ್ ಸಿ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಒಂದು ನೆಲ್ಲಿಕಾಯಿಯನ್ನು ತುರಿದು ಅದಕ್ಕೆ ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಕಲೆಗಳ ಮೇಲೆ ಹಚ್ಚಿಕೊಳ್ಳಿ. ಲಘುವಾಗಿ ಕೈಗಳಿಂದ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಮುಖದ ಮೇಲಿನ ಕಲೆಗಳು ಕಡಿಮೆಯಾಗುತ್ತವೆ.
ಮೊಸರು: ಮೊಸರು ಸೇವನೆಯಿಂದ ಸಾಕಷ್ಟು ಪ್ರಯೋಜನಗಳಿವೆ. ಅದೇ ರೀತಿ ಮೊಸರನ್ನು ಚರ್ಮದ ಮೇಲೆ ಹಚ್ಚಿಕೊಳ್ಳುವುದರಿಂದ್ಲೂ ಸಾಕಷ್ಟು ಅನುಕೂಲವಿದೆ. ಮೊಸರಿನಲ್ಲಿ ಆಂಟಿ ಒಕ್ಸಿಡೆಂಟ್ ಮತ್ತು ಉರಿಯೂತ ನಿವಾರಕ ಗುಣಗಳು ಕಂಡುಬರುತ್ತವೆ. ಮೊಸರಿಗೆ 2 ಚಿಟಿಕೆ ಅರಿಶಿನವನ್ನು ಮಿಶ್ರಣ ಮಾಡಿ. ನಂತರ ಈ ಪೇಸ್ಟ್ ಅನ್ನು ಮುಖದ ಮೇಲಿನ ಕಲೆಗಳಿಗೆ ಹಚ್ಚಿಕೊಂಡು ನಿಧಾನವಾಗಿ ಮಸಾಜ್ ಮಾಡಿ. ನಂತರ ಸ್ವಚ್ಛವಾಗಿ ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ಕಲೆಗಳು ನಿವಾರಣೆಯಾಗುವುದರ ಜೊತೆಗೆ ಚರ್ಮಕ್ಕೆ ಹೊಳಪು ಬರುತ್ತದೆ.