ಜೋಳ ದೇಸಿ ಆಹಾರ. ಇದರ ರುಚಿ ಅನೇಕರನ್ನು ಆಕರ್ಷಿಸುತ್ತದೆ. ಭಾರತದಲ್ಲಿ ಹೆಚ್ಚಿನ ಜನರು ಎಳೆ ಜೋಳವನ್ನು ಬೆಂಕಿ ಕೆಂಡದಲ್ಲಿ ಸುಟ್ಟು ತಿನ್ನಲು ಇಷ್ಟಪಡ್ತಾರೆ. ಇತ್ತೀಚಿನ ದಿನಗಳಲ್ಲಿ ಜೋಳವನ್ನು ಬೇಯಿಸಿ ತಿನ್ನುವ ಪ್ರವೃತ್ತಿಯೂ ಹೆಚ್ಚಾಗಿದೆ.
ಜೋಳದಲ್ಲಿ ಫೈಬರ್, ವಿಟಮಿನ್ ಸಿ, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ ಸಮೃದ್ಧವಾಗಿವೆ, ಅದಕ್ಕಾಗಿಯೇ ಇದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅನೇಕ ಆರೋಗ್ಯ ತಜ್ಞರು ಇದನ್ನು ನಿಯಮಿತವಾಗಿ ತಿನ್ನಲು ಶಿಫಾರಸು ಮಾಡುತ್ತಾರೆ.
ಸಾಮಾನ್ಯವಾಗಿ ಎಲ್ಲರೂ ಜೋಳ ಬೇಯಿಸುವಾಗ ಅದನ್ನು ಸುತ್ತುವರಿದಿರುವ ರೇಷ್ಮೆಯಂತಹ ದಾರಗಳನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಅನುಕೂಲಗಳಿವೆ.
1. ಕೊಲೆಸ್ಟ್ರಾಲ್: ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರಲ್ಲೂ ಕೊಲೆಸ್ಟ್ರಾಲ್ ಹೆಚ್ಚಾಗುತ್ತಿದೆ. ಅದನ್ನು ನಿಯಂತ್ರಣದಲ್ಲಿಡುವುದು ಅವಶ್ಯಕ, ಇಲ್ಲದಿದ್ದರೆ ಹೃದಯದ ಕಾಯಿಲೆಗಳಿಗೆ ತುತ್ತಾಗುವ ಅಪಾಯವಿದೆ. ಜೋಳದ ಸುತ್ತ ಇರುವ ಈ ದಾರಗಳನ್ನು ಸೇವಿಸುವುದರಿಂದ ರಕ್ತನಾಳಗಳಲ್ಲಿರುವ ಕೊಲೆಸ್ಟ್ರಾಲ್ ಹೊರಬರಲು ಪ್ರಾರಂಭಿಸುತ್ತದೆ.
2. ಮಧುಮೇಹ: ಕಾರ್ನ್‌ನಲ್ಲಿರುವ ರೇಷ್ಮೆಯಂತಹ ದಾರಗಳು ಮಧುಮೇಹದಿಂದ ಬಳಲುತ್ತಿರುವವರಿಗೆ ವರದಾನವೆಂದೇ ಹೇಳಬಹುದು. ಅವು ಮಧುಮೇಹವನ್ನು ನಿಯಂತ್ರಿಸುವ ಗುಣಗಳನ್ನು ಹೊಂದಿವೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ.
3. ಇಮ್ಯೂನಿಟಿ : ಕೊರೊನಾ ಸಾಂಕ್ರಾಮಿಕ ಬಂದಾಗಿನಿಂದ್ಲೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಎಲ್ಲರೂ ಜಾಗೃತರಾಗಿದ್ದಾರೆ. ವಿಟಮಿನ್ ಸಿ ಕಾರ್ನ್ ಫೈಬರ್‌ನಲ್ಲಿ ಕಂಡುಬರುವುದರಿಂದ, ಅದರ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
4. ಜೀರ್ಣಕ್ರಿಯೆ: ಉದರ ಬಾಧೆಯಿಂದ ಬಳಲುತ್ತಿರುವವರು ಜೋಳದ ಈ ದಾರಗಳನ್ನು ಸೇವಿಸಬೇಕು. ಏಕೆಂದರೆ ಇದರಲ್ಲಿ ಫೈಬರ್ ಅಂಶವಿದೆ. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಸಹಾಯಕವೆಂದು ಪರಿಗಣಿಸಲಾಗಿದೆ.
5. ಗರ್ಭಿಣಿಯರಿಗೆ ಲಾಭದಾಯಕ : ಗರ್ಭಿಣಿಯರು ಈ ಕಾರ್ನ್ ಫೈಬರ್ ಅನ್ನು ಸೇವಿಸಬೇಕು. ಏಕೆಂದರೆ ಅದರಲ್ಲಿ ಫೋಲಿಕ್ ಆಮ್ಲ ಕಂಡುಬರುತ್ತದೆ. ಇದು ಗರ್ಭಿಣಿಯರಿಗೆ ಮತ್ತು ಹೊಟ್ಟೆಯಲ್ಲಿರುವ ಮಗುವಿಗೆ ಪ್ರಯೋಜನಕಾರಿ.