ಮನೆಯಲ್ಲಿ ಹಿರಿಯರು ಸಾಂಬ್ರಾಣಿ (ಲೋಬಾನ) ಬಗ್ಗೆ ಹೇಳ್ತಿರುತ್ತಾರೆ. ಇದರ ಹೊಗೆಯನ್ನು ಮನೆಗೆ ಹಾಕಿದ್ರೆ ಮನೆಯಲ್ಲಿ ಸುಖ-ಶಾಂತಿ ನೆಲೆಸಿರುತ್ತದೆ.
ಮನೆಗೆ ಸಾಂಬ್ರಾಣಿ ಹೊಗೆ ಹಾಕಿದ್ರೆ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಕೆಟ್ಟ ದೃಷ್ಟಿ ಕೂಡ ದೂರವಾಗುತ್ತದೆ. ಇದನ್ನು ಹಚ್ಚುವುದು ಕಷ್ಟದ ಕೆಲಸವಲ್ಲ. ಇದನ್ನು ಹಚ್ಚಿ ಹೊಗೆಯನ್ನು ಇಡೀ ಮನೆಗೆ ತೋರಿ ನಂತ್ರ ಮನೆ ಹೊರಗೆ ಇಡಬೇಕು. ಸಗಣಿ ಜೊತೆ ಸಾಂಬ್ರಾಣಿ ಹಾಕಿದ್ರೆ ಲಾಭಕರ.
ಪೂಜೆ ಮಾಡುವಾಗ ದೊಡ್ಡ ಸ್ವರದಲ್ಲಿ ಮಂತ್ರವನ್ನು ಉಚ್ಛರಿಸಿ. ನಿಮ್ಮ ಮಂತ್ರ ಇಡೀ ಮನೆಗೆ ತಲುಪಬೇಕು. ಹಾಗೆ ಪೂಜೆ ನಂತ್ರ ಶಂಖವನ್ನು ಊದಬೇಕು. ಶಂಖದ ಶಬ್ಧದಿಂದ ಮನೆ ಶುದ್ಧವಾಗುತ್ತದೆ. ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಸಣ್ಣ ಸಣ್ಣ ಕಿಟಾಣುಗಳ ನಾಶವಾಗುತ್ತದೆ.
ಪ್ರತಿ ದಿನ ಪೂಜೆ, ದೇವರ ಆರಾಧನೆ ಮಾಡುವುದ್ರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ. ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿರುವವರು ನೀವಾಗಿದ್ದರೆ ಭೈರವ ರಕ್ಷಾ ಸ್ತೋತ್ರ ಮತ್ತು ಕಾಳಿ ಮಾ ಮಂತ್ರವನ್ನು ಜಪಿಸಬೇಕು.
ಕೊಳಕಿದ್ದ ಜಾಗದಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿರುತ್ತದೆ. ಮನಸ್ಸು ಚಂಚಲಗೊಳ್ಳುತ್ತದೆ. ಒತ್ತಡ ಹೆಚ್ಚಾಗುತ್ತದೆ. ನೆಮ್ಮದಿಯಿಲ್ಲದೆ ಗಲಾಟೆ, ಜಗಳ ಶುರುವಾಗುತ್ತದೆ. ಹಾಗಾಗಿ ಸದಾ ಮನೆ ಸ್ವಚ್ಛವಿರುವಂತೆ ನೋಡಿಕೊಳ್ಳಿ.