alex Certify ಪಪ್ಪಾಯ ಹಣ್ಣಿನ ಬೀಜ ಬಿಸಾಡಬೇಡಿ; ಅದರಲ್ಲೂ ಇದೆ ಈ ಔಷಧೀಯ ಗುಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಪ್ಪಾಯ ಹಣ್ಣಿನ ಬೀಜ ಬಿಸಾಡಬೇಡಿ; ಅದರಲ್ಲೂ ಇದೆ ಈ ಔಷಧೀಯ ಗುಣ

ಪಪ್ಪಾಯ ಪ್ರತಿಯೊಬ್ಬರೂ ಸೇವಿಸಬಹುದಾದಂತಹ ಆರೋಗ್ಯಕರ ಹಣ್ಣು. ಬಡವರು, ಶ್ರೀಮಂತರು ಎಲ್ಲರೂ ತಿನ್ನಬಹುದಾದಷ್ಟು ಅಗ್ಗ. ಆದ್ರೆ ಸಾಮಾನ್ಯವಾಗಿ ನಾವೆಲ್ಲರೂ ಪಪ್ಪಾಯ ಹಣ್ಣನ್ನು ತಿನ್ನುವ ಸಂದರ್ಭದಲ್ಲಿ ಬೀಜಗಳನ್ನು ಎಸೆದುಬಿಡುತ್ತೇವೆ.

ಆದರೆ ಪಪ್ಪಾಯ ಬೀಜಗಳನ್ನು ಎಸೆಯಬಾರದು. ಯಾಕಂದ್ರೆ ಹಲವಾರು ರೋಗಗಳಿಗೆ ಈ ಬೀಜಗಳಲ್ಲಿ ಮದ್ದಿದೆ. ಪಪ್ಪಾಯ ಬೀಜಗಳಲ್ಲಿ ಅನೇಕ ರೀತಿಯ ಪೋಷಕಾಂಶಗಳಿವೆ. ಇದನ್ನು ನೇರವಾಗಿ ತಿಂದರೆ ಕಹಿಯಾಗಿರುತ್ತದೆ. ಹಾಗಾಗಿ ಬಿಸಿಲಿನಲ್ಲಿ ಒಣಗಿಸಿ, ನಂತರ ಪುಡಿಮಾಡಿ ಸೇವಿಸಬೇಕು.

ಹೃದಯದ ಆರೋಗ್ಯ: ಭಾರತದಲ್ಲಿ ಹೃದ್ರೋಗಿಗಳ ಸಂಖ್ಯೆ ಅತಿ ಹೆಚ್ಚಾಗಿದೆ. ಚಿಕ್ಕ ಚಿಕ್ಕ ವಯಸ್ಸಿನವರು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಹಾಗಾಗಿ ಪಪ್ಪಾಯ ಬೀಜಗಳು ಸಂಜೀವಿನಿಯಂತೆ ಕೆಲಸ ಮಾಡಬಲ್ಲದು. ಇದರಲ್ಲಿರುವ ಆಂಟಒಕ್ಸಿಡೆಂಟ್‌ಗಳು ನಮ್ಮ ದೇಹವನ್ನು ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ. ಈ ಬೀಜಗಳ ಸಹಾಯದಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು.

ಊತ ಕಡಿಮೆಯಾಗುತ್ತದೆ: ಉರಿಯೂತವನ್ನು ಕಡಿಮೆ ಮಾಡಲು ಪಪ್ಪಾಯ ಬೀಜಗಳು ಬಹಳ ಪರಿಣಾಮಕಾರಿ. ಈ ಬೀಜಗಳಲ್ಲಿ ಆಲ್ಕಲಾಯ್ಡ್‌ಗಳು, ಫ್ಲೇವನಾಯ್ಡ್‌ಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇದರಿಂದಾಗಿ ದೇಹದಲ್ಲಿ ಇರುವ ಊತ ಮಾಯವಾಗುತ್ತದೆ.

ಚರ್ಮಕ್ಕೆ ಒಳ್ಳೆಯದು : ನೀವು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಪಪ್ಪಾಯ ಹಣ್ಣಿನ ಬೀಜಗಳು ನಿಮಗೆ ಲಾಭದಾಯಕ. ಇದರಲ್ಲಿರುವ ಆಂಟಿಯೇಜ್ ಗುಣಲಕ್ಷಣಗಳು ಚರ್ಮವನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಚರ್ಮದ ಸೋಂಕು ಅಥವಾ ತುರಿಕೆಯ ಸಮಸ್ಯೆ ಇದ್ದರೆ ಅದು ಕೂಡ ನಿವಾರಣೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...