ದಿನದಲ್ಲಿ ಒಂದು ನಿಮಿಷ ಈ ಕೆಲಸ ಮಾಡಿ ಪರಿಣಾಮ ನೋಡಿ

ಕೆಲಸದ ಒತ್ತಡದಲ್ಲಿ ಸರಿಯಾಗಿ ಸಮಯ ಸಿಗೋದಿಲ್ಲ. ಕಾಲದ ಜೊತೆ ಓಡುವ ಜನರಿಗೆ ಅರಿವಿಲ್ಲದಂತೆ ಬೊಜ್ಜು ಆವರಿಸಿಕೊಳ್ಳುತ್ತದೆ. ಸದಾ ಕಂಪ್ಯೂಟರ್ ಮುಂದೆ ಕೆಲಸ ಮಾಡುವವರಿಗೆ ಬೊಜ್ಜಿನ ಸಮಸ್ಯೆ ಕಾಡದೆ ಇರದು. ಹೊಟ್ಟೆ ಸೇರಿದಂತೆ ದೇಹದ ಅನೇಕ ಭಾಗಗಳು ಅಗತ್ಯಕ್ಕಿಂತ ಹೆಚ್ಚು ಬೆಳೆದುಬಿಡುತ್ತವೆ.

ಪ್ರತಿದಿನ ವ್ಯಾಯಾಮ, ವಾಕಿಂಗ್, ಜಿಮ್ ಗೆ ಸಮಯ ಕೊಡೋದು ಅಸಾಧ್ಯ. ಒಂದು ಗಂಟೆ, ಅರ್ಧ ಗಂಟೆ ಸಮಯ ನೀಡಲೂ ಸಾಧ್ಯವಾಗದವರು ತಮ್ಮ ಬ್ಯುಸಿ ಜೀವನದಲ್ಲಿ ಕೇವಲ 60 ಸೆಕೆಂಡ್ ವರ್ಕ್ ಔಟ್ ಗೆ ನೀಡಿದ್ರೆ ಸಾಕು. ಒಂದೇ ಒಂದು ವ್ಯಾಯಾಮ ನಿಮ್ಮ ತೂಕ ಇಳಿಸಲು ನೆರವಾಗುತ್ತದೆ.

ಹಲಗೆ ವ್ಯಾಯಾಮ (Plank) ಮಾಡಿದ್ರೆ ಸಾಕು. ಸಾವಿರ ಬಾರಿ ಎದ್ದು ಕುಳಿತು ಮಾಡಿದಷ್ಟು ಕ್ಯಾಲರಿ ಈ 60 ಸೆಕೆಂಡ್ ಮಾಡಿದ ಹಲಗೆ ವ್ಯಾಯಾಮದಿಂದ ಬರ್ನ್ ಆಗುತ್ತದೆ. ಇದು ಇಡೀ ದೇಹದ ಬೊಜ್ಜನ್ನು ಕರಗಿಸುತ್ತದೆ. ಜಿಮ್ ಹೋಗುವವರಿಗೆ ಇದ್ರ ಬಗ್ಗೆ ತಿಳಿದಿರುತ್ತದೆ. ಇದು ಹೊಟ್ಟೆ ಬೊಜ್ಜನ್ನು ಸುಲಭವಾಗಿ ಕರಗಿಸುತ್ತದೆ. ಹಾಗೆ ಸ್ನಾಯುಗಳಿಗೆ ಶಕ್ತಿ ನೀಡುತ್ತದೆ.

ನೆನಪಿರಲಿ ಸರಿಯಾದ ವಿಧಾನದಲ್ಲಿ ಇದನ್ನು ಮಾಡಬೇಕು. ಇಲ್ಲವಾದ್ರೆ ಪ್ರಯೋಜನ ಶೂನ್ಯ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read