ಸತತವಾಗಿ ಮುಟ್ಟು ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಅಂದರೆ ವೈದ್ಯರನ್ನು ಸಂಪರ್ಕಿಸಲೇಬೇಕು. ಅದು ಅಲಕ್ಷಿಸುವ ವಿಚಾರವಲ್ಲ. ಆದರೆ ಎಲ್ಲೋ ಅಪರೂಪಕ್ಕೆ ಆಗುತ್ತಿದ್ದರೆ ಮನೆ ಮದ್ದು ಸಾಕು.
ಕ್ಯಾರೆಟ್ : ಕ್ಯಾರೆಟ್ ನಲ್ಲಿ ಹಾರ್ಮೋನ್‌ಗಳ ಸಮತೋಲನ ಕಾಪಾಡುವ ಶಕ್ತಿ ಇದೆ. ಜ್ಯೂಸ್ ಮೂಲಕ ಸೇವಿಸಿ ಅಥವಾ ಹಾಗೇ ಸೇವಿಸಿ.
ಬಾದಾಮಿ : ನಿತ್ಯ ಬಾದಾಮಿ ಸೇವಿಸುವುದರಿಂದ ನಿಮ್ಮ ಋತುಚಕ್ರ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ.
ಅಲೋವೇರಾ : ಇದರ ರಸವನ್ನು ಸೇವಿಸುವುದರಿಂದ ಹಾರ್ಮೋನ್ ಗಳಲ್ಲಿ ಸಮತೋಲನ ಉಂಟಾಗುತ್ತದೆ. ಇದರ ಪರಿಣಾಮ ಮುಟ್ಟು ಸಮರ್ಪಕವಾಗಿ ಆಗುತ್ತದೆ.
ಪಪ್ಪಾಯ : ಹೆಚ್ಚೆಚ್ಚು ಪಪ್ಪಾಯ ಹಣ್ಣು ಸೇವಿಸಿ. ಮುಟ್ಟಿನ ಸಮಸ್ಯೆಯಿಂದ ಪಾರಾಗಲು ಇದು ಅತ್ಯುತ್ತಮ. ಬೆಳಗಿನ ಹೊತ್ತು ಸೇವಿಸಿದರೆ ಒಳ್ಳೆಯದು.
ಅರಿಶಿಣ : ದಿನಕ್ಕೆ ಎರಡು ಬಾರಿ ಬೆಚ್ಚಗಿನ ನೀರಿನ ಜೊತೆ ಅರಿಶಿಣದ ಪುಡಿ ಸೇರಿಸಿಕೊಂಡು ಕುಡಿಯಿರಿ. ಬೆಚ್ಚಗಿನ ಹಾಲಿನ ಜತೆಯೂ ಸೇವಿಸಬಹುದು. ಅದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗಳು ಹಾರ್ಮೋನ್ ಗಳನ್ನು ಬ್ಯಾಲೆನ್ಸ್ ಮಾಡುತ್ತದೆ.