ಆಹಾರ ಮತ್ತು ಪಾನೀಯ ಸೇವನೆಯಲ್ಲಿನ ವ್ಯತ್ಯಾಸ ಕೆಲವೊಮ್ಮೆ ಫಜೀತಿ ಉಂಟು ಮಾಡುತ್ತದೆ. ಮಲಬದ್ಧತೆಯೂ ಅವುಗಳಲ್ಲೊಂದು. ಈ ಸಮಸ್ಯೆಯಿಂದ ಹೊಟ್ಟೆ ಉಬ್ಬರಿಸಿದಂತಾಗಿ ಏನು ತಿಂದರೂ ರುಚಿಸದ ಸ್ಥಿತಿ ಒದಗುತ್ತದೆ. ಬ್ರೊಕೋಲಿ ಸೇವನೆಯಿಂದ ಈ ಸಮಸ್ಯೆ ಬಗೆಹರಿಸಬಹುದು.
ಹೆಚ್ಚಿನ ಸಮಯ ಕುಳಿತಲ್ಲೇ ಕಳೆಯುವುದು, ವ್ಯಾಯಾಮದ ಕೊರತೆ, ಜಂಕ್ ಫುಡ್ ತಿನ್ನುವುದು ಮತ್ತಿತರ ಕಾರಣಗಳಿಂದ ಮಲಬದ್ಧತೆ ಸಮಸ್ಯೆ ಬರುತ್ತದೆ. ಬ್ರೊಕೋಲಿಯಲ್ಲಿ ಅನೇಕ ಪೋಷಕಾಂಶಗಳಿದ್ದು, ಅವು ಆರೋಗ್ಯಕರವಾಗಿವೆ, ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತವೆ.
ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಫೈಟೊಕೆಮಿಕಲ್ ಗುಣವಿದ್ದು, ಎಲ್ಲ ರೀತಿಯ ಸೋಂಕು ಮತ್ತು ರೋಗಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಕಡಿಮೆ ಕ್ಯಾಲೊರಿ ಇರುವ ಈ ತರಕಾರಿ ಅತ್ಯಧಿಕ ಅಂಟಿ ಆಕ್ಸಿಡೆಂಟ್ ಗಳು ಮತ್ತು ಅಗತ್ಯ ಖನಿಜಗಳಿಂದ ತುಂಬಿದೆ.
ವಿಟಮಿನ್ ಸಿ ಧಾರಾಳವಾಗಿರುವ ಬ್ರೊಕೋಲಿಯನ್ನು ಸ್ಯಾಂಡ್ ವಿಚ್, ಸೂಪ್, ಸಲಾಡ್ ರೂಪದಲ್ಲಿ ಸೇವಿಸಿ ನಿಮ್ಮ ಮಲಬದ್ಧತೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.