ಸಾಸಿವೆ ಎಣ್ಣೆಯನ್ನು ಸೌಂದರ್ಯವರ್ಧಕವಾಗಿಯೂ ಬಳಸಬಹುದು ಎಂಬುದು ನಿಮಗೆ ಗೊತ್ತೇ….?
ಸಾಸಿವೆ ಎಣ್ಣೆಯಲ್ಲಿ ವಿಟಮಿನ್ ಬಿ, ಎ, ಇ, ಕ್ಯಾಲ್ಸಿಯಂ ಹೇರಳವಾಗಿರುವುದರಿಂದ ಇದನ್ನು ಚರ್ಮದ ಸೋಂಕಿಗೆ ಔಷಧಿಯಾಗಿ ಬಳಸಬಹುದು. ಪ್ರತಿ ರಾತ್ರಿ ಮಲಗುವ ಮುನ್ನ ಎರಡು ಚಮಚ ತೆಂಗಿನೆಣ್ಣೆಗೆ ಎರಡು ಚಮಚ ಸಾಸಿವೆ ಎಣ್ಣೆ ಬೆರೆಸಿ ಮಿಶ್ರಣ ತಯಾರಿಸಿ ಮುಖದ ಮೇಲೆ ಹಚ್ಚಿ 15 ನಿಮಿಷದ ಬಳಿಕ ಫೇಸ್ ವಾಶ್ ನಿಂದ ಮುಖ ತೊಳೆಯಿರಿ. ಇದರಿಂದ ಮುಖ ಹೊಳಪು ಪಡೆಯುವುದನ್ನು ನೀವು ನೋಡಿ.
ಸನ್ ಟ್ಯಾನ್ ಕಲೆಗಳಿದ್ದರೆ ಆ ಜಾಗಕ್ಕೆ ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡಿ. ಬಳಿಕ ಹತ್ತಿ ಉಂಡೆಯಿಂದ ಅದನ್ನು ಒರೆಸಿ ತೆಗೆಯಿರಿ, ವಾರದ ಕಾಲ ಇದನ್ನು ಪುನರಾವರ್ತಿಸುವುದರಿಂದ ಕಲೆಗಳು ಮಾಯವಾಗುತ್ತವೆ.
ಅರಿಶಿನ, ಕೇಸರಿ, ಶ್ರೀಗಂಧ, ಕಡಲೆಹಿಟ್ಟು ಮತ್ತು ಸಾಸಿವೆ ಕಾಳಿನ ಎಣ್ಣೆ ಬೆರೆಸಿ ಮುಖಕ್ಕೆ ಸ್ಕ್ರಬ್ ಮಾಡುವುದರಿಂದ ಸತ್ತ ಚರ್ಮದ ಕೋಶಗಳು ದೂರವಾಗುತ್ತವೆ ಮಾತ್ರವಲ್ಲ ತ್ವಚೆಯ ಸೋಂಕು ಕೂಡಾ ಕಡಿಮೆಯಾಗುತ್ತದೆ.
ಕಡಲೆಹಿಟ್ಟಿಗೆ ಸಾಸಿವೆ ಎಣ್ಣೆ, ಲಿಂಬೆರಸ ಮತ್ತು ಮೊಸರು ಬೆರೆಸಿ ದಪ್ಪಗಿನ ಪೇಸ್ಟ್ ತಯಾರಿಸಿ. ಮುಖಕ್ಕೆ ಹಚ್ಚಿ 15 ನಿಮಿಷ ಬಳಿಕ ತೊಳೆದುಕೊಂಡರೆ ಮೊಡವೆಗಳೂ ದೂರವಾಗುತ್ತವೆ.