ಶ್ರಾವಣ ಮಾಸದಲ್ಲಿ ಭಗವಂತ ಶಿವನ ಆರಾಧನೆ ನಡೆಯುತ್ತದೆ. ಜೊತೆ ಜೊತೆಯಲ್ಲಿ ಈ ಮಾಸದಲ್ಲಿ ಅನೇಕ ಹಬ್ಬಗಳು ಬರುತ್ತವೆ. ಶ್ರಾವಣ ಮಾಸದಲ್ಲಿ ಭಕ್ತರಿಗೆ ಶಿವ ಬೇಡಿದ್ದೆಲ್ಲ ನೀಡುತ್ತಾನೆ ಎಂಬ ನಂಬಿಕೆಯಿದೆ.
ಶ್ರಾವಣ ಮಾಸ ಮಹಿಳೆಯರಿಗೂ ವಿಶೇಷವಾಗಿದೆ. ಮದುವೆಯಾಗಿ ಗಂಡನ ಮನೆಗೆ ಹೋಗಿರುವ ಮಗಳು, ಗಂಡನ ಮನೆಯಲ್ಲಿ ಕಷ್ಟ ಅನುಭವಿಸುತ್ತಿದ್ದರೆ ಶ್ರಾವಣ ಮಾಸದಲ್ಲಿ ಆಕೆ ಕೈನಲ್ಲಿ ಕೆಲ ಕೆಲಸ ಮಾಡಿಸಿ. ಇದ್ರಿಂದ ಆಕೆ ಜೀವನ ಸುಖಕರವಾಗಲಿದೆ.
ಶ್ರಾವಣ ಮಾಸದಲ್ಲಿ ಮಗಳು ಮನೆಗೆ ಬಂದ್ರೆ ಆಕೆ ತಂದೆ ಅಥವಾ ಸಹೋದರನ ಸಹಾಯದಿಂದ ಆಕೆ ಕೈನಲ್ಲಿ ಮನೆ ಅಂಗಳದಲ್ಲಿ ತುಳಸಿ ಗಿಡ ನೆಡಿಸಿ. ಮಗಳು ಮನೆಯಲ್ಲಿರುವವರೆಗೂ ತುಳಸಿಗೆ ದೀಪ ಬೆಳಗುವಂತೆ ಮಗಳಿಗೆ ಹೇಳಿ. ಇದ್ರಿಂದ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ.
ಶ್ರಾವಣ ಮಾಸದ ಮಂಗಳವಾರ ಮಗಳ ಕೈನಿಂದ ಬೆಲ್ಲ ಪಡೆದು ಅದನ್ನು ಮಣ್ಣಿನ ಪಾತ್ರೆಗೆ ಹಾಕಿ ನಿರ್ಜನ ಪ್ರದೇಶದಲ್ಲಿ ಮಣ್ಣಿನಲ್ಲಿ ಹೂತಿಡಿ. ಹೀಗೆ ಮಾಡಿದ್ರೆ ಆಸ್ತಿ, ಮನೆಗೆ ಸಂಬಂದಿಸಿದ ಸಮಸ್ಯೆ ದೂರವಾಗಲಿದೆ. ಆಸೆ ಈಡೇರಲಿದೆ.
ಬುಧವಾರ ಮಗಳಿಂದ ಅಡಿಕೆಯನ್ನು ಪಡೆದು ಅದನ್ನು ದಾರದಲ್ಲಿ ಸುತ್ತಿ, ಹಳದಿ ಬಟ್ಟೆಯಲ್ಲಿ ಕಟ್ಟಿ, ಮನೆ ಅಥವಾ ದೇವಸ್ಥಾನದಲ್ಲಿ ನೇತುಹಾಕಿ. ಇದ್ರಿಂದ ಸಾಲ ಮನ್ನಾ ಆಗುತ್ತದೆ. ಜೀವನ ಪರ್ಯಂತ ವ್ಯಕ್ತಿ ಸಾಲದ ಹೊರೆಯಲ್ಲಿ ಬೀಳುವುದಿಲ್ಲವೆಂದು ನಂಬಲಾಗಿದೆ.