ಶ್ರಾವಣ ಮಾಸದ ಮಂಗಳವಾರ ಹನುಮಂತನ ಪೂಜೆ ಮಾಡುವುದು ಶ್ರೇಷ್ಠಕರ. ಪಂಚಾಂಗದ ಪ್ರಕಾರ ಶ್ರಾವಣ ಮಾಸ ವರ್ಷದ ಐದನೇ ತಿಂಗಳು. ಶಿವ ಪೂಜೆಗೆ ವಿಶೇಷ ಕಾಲ. ಹನುಮಂತನನ್ನು ಭಗವಂತನ ಹನ್ನೊಂದನೆ ಅವತಾರವೆಂದು ನಂಬಲಾಗಿದೆ.
ಶ್ರಾವಣ ಮಂಗಳವಾರ ಹನುಮಂತನಿಗೆ ಮಾಡುವ ಪೂಜೆಯಿಂದ ಶೌರ್ಯ, ಧೈರ್ಯ, ಬುದ್ದಿವಂತಿಕೆ, ಶಕ್ತಿ, ಪವಿತ್ರತೆ ಪ್ರಾಪ್ತಿಯಾಗಿ, ನೋವು, ಕಷ್ಟಗಳು ದೂರವಾಗುತ್ತವೆ.
ಶ್ರಾವಣ ಮಾಸದ ಐದು ಮಂಗಳವಾರ ಸಂಜೆ 5 ಗಂಟೆ ನಂತ್ರ ಹನುಮಂತನಿಗೆ ಮಲ್ಲಿಗೆ ಎಣ್ಣೆ ಬಳಸಿ ದೀಪ ಹಚ್ಚಿ. ಎಲ್ಲ ನೋವು ದೂರವಾಗುತ್ತದೆ.
ವೀಳ್ಯದೆಲೆಯನ್ನು ತೆಗೆದುಕೊಂಡು ಅದರ ಮೇಲೆ ಬೆಲ್ಲ ಹಾಗೂ ಕಡಲೆ ಇಟ್ಟುಕೊಂಡು ಸೇವನೆ ಮಾಡಿ.
ಭಗವಂತ ಹನುಮಂತನಿಂದ ಧನ ಪ್ರಾಪ್ತಿ ಮಾಡಿಕೊಳ್ಳಬಯಸುವವರು ಗುಲಾಬಿ ಹೂವಿನ ಮಾಲೆಯನ್ನು ಕೈನಿಂದ ತಯಾರಿಸಿ ಹನುಮಂತನಿಗೆ ಅರ್ಪಣೆ ಮಾಡಿ. ನಂತ್ರ ಆ ಮಾಲೆಯ ಒಂದು ಹೂವನ್ನು ಮನೆಗೆ ತನ್ನಿ. ಮನೆಗೆ ತರುವಾಗ ಹಿಂದೆ ತಿರುಗಿ ನೋಡಬೇಡಿ. ಮನೆಗೆ ತಂದ ಹೂವನ್ನು ಕಪ್ಪು ವಸ್ತ್ರದಲ್ಲಿ ಕಟ್ಟಿ ಮನೆಯಲ್ಲಿ ಹಣವಿಡುವ ಸ್ಥಳದಲ್ಲಿಡಿ.