ಸೌಂದರ್ಯಕ್ಕೆ ಕೊಟ್ಟಷ್ಟು ಮಹತ್ವವನ್ನು ಆರೋಗ್ಯಕ್ಕೆ ಮಹಿಳೆಯರು ನೀಡುವ ಅಗತ್ಯವಿದೆ. ದಿನವಿಡಿ ಕೆಲಸ ಮಾಡುವ ಮಹಿಳೆಯರಿಗೆ ರಾತ್ರಿ ವಿಶ್ರಾಂತಿ ಅತ್ಯಗತ್ಯ. ಸರಿಯಾದ ಆಹಾರ-ನಿದ್ರೆ ಜೊತೆಗೆ ರಾತ್ರಿ ಮಲಗುವ ವೇಳೆ ಧರಿಸುವ ಬಟ್ಟೆ ಬಗ್ಗೆಯೂ ಗಮನ ನೀಡಬೇಕಾಗುತ್ತದೆ.
ರಾತ್ರಿ ಸಡಿಲವಾದ ಬಟ್ಟೆ ಧರಿಸುವುದು ಅಗತ್ಯ. ಕೆಲ ಮಹಿಳೆಯರು ಇದನ್ನು ನಿರ್ಲಕ್ಷ್ಯಿಸ್ತಾರೆ. ರಾತ್ರಿ ಬ್ರಾ ಧರಿಸಿ ಮಲಗುತ್ತಾರೆ. ಆದ್ರೆ ಇದು ನಮ್ಮ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂಬುದನ್ನು ನೀವು ಊಹಿಸಿರಲಿಕ್ಕಿಲ್ಲ.
ಸ್ತನ ಕ್ಯಾನ್ಸರ್ ಅಪಾಯ : ಕೆಲ ಮಹಿಳೆಯರು ರಾತ್ರಿ ಬ್ರಾ ಧರಿಸಿ ಮಲಗುತ್ತಾರೆ. ಬ್ರಾ ಧರಿಸಿ ಮಲಗುವುದ್ರಿಂದ ಯಾವುದೇ ಸಮಸ್ಯೆಯಿಲ್ಲ ಎನ್ನುವವರಿದ್ದಾರೆ. ಆದ್ರೆ ಬ್ರಾ ಧರಿಸಿ ಮಲಗುವುದ್ರಿಂದ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚಿರುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ. ಅಷ್ಟು ಅನಿವಾರ್ಯವಾದಲ್ಲಿ ಸ್ಪೋರ್ಟ್ಸ್ ಬ್ರಾ ಧರಿಸಿ ಮಲಗಿ.
ರಕ್ತದ ಹರಿವು : ರಾತ್ರಿ ಬ್ರಾ ಧರಿಸಿ ಮಲಗುವುದ್ರಿಂದ ರಕ್ತ ಸಂಚಾರ ಸರಿಯಾಗುವುದಿಲ್ಲ. ಇದ್ರಿಂದ ಅನೇಕ ಸಮಸ್ಯೆ ಕಾಡುತ್ತದೆ. ಕ್ಯಾನ್ಸರ್ ಕಾಡುವ ಅಪಾಯವೂ ಹೆಚ್ಚು.
ಚರ್ಮದ ಸಮಸ್ಯೆ : ರಾತ್ರಿ ಟೈಟ್ ಬ್ರಾ ಧರಿಸಿ ಮಲಗುವುದ್ರಿಂದ ಗಾಳಿ ಸರಿಯಾಗಿ ಆಡುವುದಿಲ್ಲ. ಇದು ತುರಿಕೆಗೆ ಕಾರಣವಾಗುತ್ತದೆ. ಚರ್ಮ ಒಣಗಲು ಶುರುವಾಗುತ್ತದೆ. ಇದ್ರಿಂದ ಅನಿದ್ರೆ ಕಾಡುವುದುಂಟು. ಹಾಗಾಗಿ ಸರಿ ಸೈಜ್ ನ ಹಾಗೂ ಒಳ್ಳೆ ಬ್ರ್ಯಾಂಡ್ ನ ಬ್ರಾ ಧರಿಸಬೇಕು. ರಾತ್ರಿ ಬ್ರಾ ತೆಗೆದಿಟ್ಟು ಮಲಗಬೇಕು.
ಕಪ್ಪು ಕಲೆ : ರಾತ್ರಿ ಬಿಗಿಯಾದ ಬ್ರಾ ಧರಿಸಿ ಮಲಗುವುದ್ರಿಂದ ಕಪ್ಪು ಕಲೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಹಾಗೆ ಸ್ತನದ ಗಾತ್ರ ಹೆಚ್ಚಾಗುವುದಿಲ್ಲ.