alex Certify ಈ ಕಾರಣಕ್ಕೆಹೊಟ್ಟೆಯ ಬಲಭಾಗದಲ್ಲಿ ಕಾಣಿಸಿಕೊಳ್ಳುತ್ತೆ ನೋವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆಹೊಟ್ಟೆಯ ಬಲಭಾಗದಲ್ಲಿ ಕಾಣಿಸಿಕೊಳ್ಳುತ್ತೆ ನೋವು

ನಮ್ಮ ಹೊಟ್ಟೆಯಲ್ಲಿ ಬಹಳ ಮುಖ್ಯವಾದ ಅಂಗಗಳಿರುತ್ತದೆ. ಈ ಅಂಗಗಳು ಸರಿಯಾಗಿ ಕೆಲಸ ಮಾಡದಿದ್ದಾಗ ನೋವು ಕಾಣಿಸಿಕೊಳ್ಳುತ್ತದೆ. ಹಾಗಾದ್ರೆ ಹೊಟ್ಟೆಯ ಬಲಭಾಗದಲ್ಲಿ ನೋವು ಕಾಣಿಸಿಕೊಂಡರೆ ಅದಕ್ಕೆ 5 ಕಾರಣಗಳಿವೆ. ಅವು ಏನೆಂಬುದನ್ನು ತಿಳಿಯೋಣ.

ಮಲಬದ್ಧತೆ : ಮಲಬದ್ಧತೆಯಿಂದ ಕರುಳು ಚಲನೆ ಮಾಡಿದಾಗ ನಿಮಗೆ ಹೊಟ್ಟೆಯ ಬಲಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ನೋವು ಹೆಚ್ಚಿನ ಪ್ರಮಾಣದಲ್ಲಿದ್ದರೆ ಕರುಳಿನ ಕ್ಯಾನ್ಸರ್ ನಂತಹ ದೊಡ್ಡ ಸಮಸ್ಯೆಯ ಕಾರಣವಾಗಿರಬಹುದು.

ಹೊಟ್ಟೆಯ ಅಲ್ಸರ್ : ಆಹಾರದಲ್ಲಿರುವ ಬ್ಯಾಕ್ಟೀರಿಯಾಗಳಿಂದ ಇನ್ ಫೆಕ್ಷನ್ ಆಗಿ ಸಣ್ಣಕರುಳು, ಅನ್ನನಾಳದ ಒಳಪದರದಲ್ಲಿ ಹುಣ್ಣು ಬೆಳೆಯುತ್ತದೆ. ಇದರಿಂದ ಹೊಟ್ಟೆಯ ನೋವಿನ ಜೊತೆಗೆ ಅಜೀರ್ಣ, ಎದೆಯುರಿ, ವಾಂತಿಯಾಗುತ್ತದೆ.

ಪಿತ್ತಗಲ್ಲು : ಪಿತ್ತಕೋಶದ ದ್ರವ ಗಟ್ಟಿಯಾದಾಗ ಪಿತ್ತಗಲ್ಲು ಉಂಟಾಗುತ್ತದೆ. ಇದರಿಂದ ಹೊಟ್ಟೆಯ ಬಲಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಅಪೆಂಡಿಕ್ಸ್ : ಹೊಟ್ಟೆಯ ಬಲಭಾಗದ ನೋವಿಗೆ ಇದು ಒಂದು ಕಾರಣ. ಇದಕ್ಕೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಅಪಾಯವಾಗುವುದು. ಕೆಲವೊಮ್ಮೆ ಅದನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...