ಪರೀಕ್ಷೆ ಹತ್ತಿರ ಬರ್ತಾ ಇದೆ. ಯಾವುದೇ ಒತ್ತಡ ಇಲ್ಲದೆ ಹೆಚ್ಚಿನ ಅಂಕ ಪಡೆಯಬೇಕೆನ್ನುವುದು ಎಲ್ಲರ ಬಯಕೆ. ಮಕ್ಕಳ ಓದಿಗಾಗಿ ಪಾಲಕರೂ ಸಾಕಷ್ಟು ಕಷ್ಟಪಡ್ತಾರೆ. ಕೆಲವೊಂದು ವಾಸ್ತು ಟಿಪ್ಸ್ ಗಳು ಮಕ್ಕಳ ಮಾನಸಿಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಜೊತೆಗೆ ಹೆಚ್ಚಿನ ಅಂಕ ಪಡೆದು ಕ್ಲಾಸಿನಲ್ಲಿ ಟಾಪರ್ ಆಗಲು ಸಹಾಯ ಮಾಡುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಓದುವ ಕೋಣೆ ಯಾವಾಗಲೂ ವಾಯುವ್ಯ ದಿಕ್ಕಿನಲ್ಲಿರಬೇಕು. ಓದುವಾಗ ನಿಮ್ಮ ಮುಖ ಪೂರ್ವ ದಿಕ್ಕಿಗಿರಲಿ. ಇದ್ರಿಂದ ಮಕ್ಕಳಿಗೆ ಏಕಾಗ್ರತೆ ಹೆಚ್ಚಲಿದೆ. ಏಕಾಗ್ರತೆ ಹೆಚ್ಚಾದಾಗ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಓದಿದ್ದು ತುಂಬಾ ಸಮಯ ನೆನಪಿರುತ್ತದೆ.
ಓದುವಾಗ ಕುರ್ಚಿಯಲ್ಲಿ ನೇರವಾಗಿ ಕುಳಿತುಕೊಳ್ಳಿ.
ಓದುವ ಕೋಣೆಯನ್ನು ಸಕಾರಾತ್ಮಕಗೊಳಿಸಲು ಕೋಣೆಯಲ್ಲಿ ಗಣೇಶ ಹಾಗೂ ಲಕ್ಷ್ಮಿಯ ಫೋಟೋವನ್ನು ಹಾಕಿ. ಇದ್ರ ಜೊತೆಗೆ ಪ್ರಕೃತಿಯ ಚಿತ್ರವನ್ನು ಹಾಕಿ. ಗಿರಿಧಾಮಗಳ ಫೋಟೋ ಹಾಕುವುದು ಒಳ್ಳೆಯದು.
ಓದುವ ಕೋಣೆಯಲ್ಲಿ ವಿಜ್ಞಾನಿಗಳ ಫೋಟೋಗಳನ್ನು ಹಾಕುವುದರಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ. ಮಕ್ಕಳಲ್ಲಿರುವ ಸೋಮಾರಿತನ ದೂರವಾಗಿ ಏಕಾಗ್ರತೆ ಹೆಚ್ಚುತ್ತದೆ.