alex Certify ಸಕ್ಕರೆ ಸೇವನೆಯನ್ನು ಸಂಪೂರ್ಣ ನಿಲ್ಲಿಸಿದ್ರೆ ಆಗಬಹುದು ಇಂಥಾ ಅಪಾಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಕ್ಕರೆ ಸೇವನೆಯನ್ನು ಸಂಪೂರ್ಣ ನಿಲ್ಲಿಸಿದ್ರೆ ಆಗಬಹುದು ಇಂಥಾ ಅಪಾಯ…!

ಭಾರತದಲ್ಲಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮಧುಮೇಹ ಎಲ್ಲರನ್ನೂ ಭಯಪಡಿಸುವಂತ ಅಪಾಯಕಾರಿ ರೋಗವೂ ಹೌದು. ಒಮ್ಮೆ ಸಕ್ಕರೆ ಕಾಯಿಲೆ ಆರಂಭವಾಯ್ತು ಅಂದ್ರೆ ಸಕ್ಕರೆ ಹಾಗೂ ಸಿಹಿ ಪದಾರ್ಥಗಳನ್ನು ತ್ಯಜಿಸುವಂತೆ ಸಲಹೆ ನೀಡಲಾಗುತ್ತದೆ.

ಈ ಕಾಯಿಲೆಯಿಂದ ದೂರವಿರಲು ಬಯಸುವವರು ಸಕ್ಕರೆಯನ್ನು ಸಂಪೂರ್ಣ ತ್ಯಜಿಸಿಬಿಡುತ್ತಾರೆ. ಆದ್ರೆ ಸಕ್ಕರೆಯನ್ನೂ ಸ್ವಲ್ಪವೂ ಸೇವನೆ ಮಾಡದೇ ಇರುವುದು ಸರಿಯಲ್ಲ. ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಸಕ್ಕರೆಯಲ್ಲಿ ಎರಡು ವಿಧಗಳಿವೆ. ಒಂದು ನೈಸರ್ಗಿಕ ಸಕ್ಕರೆ ಮತ್ತು ಇನ್ನೊಂದು ಸಂಸ್ಕರಿಸಿದ ಸಕ್ಕರೆ. ಮಾವು, ಅನಾನಸ್, ಲಿಚಿ, ತೆಂಗಿನಕಾಯಿಯಂತಹ ಹಣ್ಣುಗಳಿಂದ ನಾವು ನೈಸರ್ಗಿಕ ಸಕ್ಕರೆಯನ್ನು ಪಡೆಯುತ್ತೇವೆ, ಆದರೆ ಸಂಸ್ಕರಿಸಿದ ಸಕ್ಕರೆಯನ್ನು ಕಬ್ಬು ಮತ್ತು ಬೀಟ್‌ರೂಟ್‌ ನಿಂದ ತಯಾರಿಸಲಾಗುತ್ತದೆ. ಮಿತವಾಗಿ ಸಕ್ಕರೆ ತಿನ್ನುವುದು ಸರಿಯಾದ ನಿರ್ಧಾರ, ಆದರೆ ಅದನ್ನು ಸಂಪೂರ್ಣವಾಗಿ ಬಿಡುವುದು ಸರಿಯಲ್ಲ.

ಕಬ್ಬು ಮತ್ತು ಸಿಹಿ ಬೀಟ್‌ರೂಟ್‌ ಗಡ್ಡೆಗಳಿಂದ ಸಂಸ್ಕರಿಸಿದ ಸಕ್ಕರೆ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಆದ್ರೆ ಇದರಲ್ಲಿ ಯಾವುದೇ ಪೌಷ್ಟಿಕಾಂಶ ಇರುವುದಿಲ್ಲ. ಆದರೆ ನೈಸರ್ಗಿಕ ಸಕ್ಕರೆಯಲ್ಲಿ ವಿಟಮಿನ್‌ಗಳು ಮತ್ತು ಖನಿಜಗಳು ಹೇರಳವಾಗಿ ಕಂಡುಬರುತ್ತವೆ. ಈ ಸಿಹಿ ಪದಾರ್ಥಗಳ ರುಚಿ ನಮ್ಮೆಲ್ಲರನ್ನೂ ಆಕರ್ಷಿಸುತ್ತದೆ. ಆದ್ದರಿಂದ ನೈಸರ್ಗಿಕ ಸಕ್ಕರೆಯನ್ನು ಸಂಪೂರ್ಣವಾಗಿ ತ್ಯಜಿಸಬೇಡಿ.

ಸಕ್ಕರೆ ಸೇವನೆಯನ್ನು ಹಠಾತ್ತನೆ ನಿಲ್ಲಿಸಿದರೆ, ದೇಹದಲ್ಲಿ ಚಟವನ್ನು ತೊರೆಯುವವರಲ್ಲಿ ಆದಂತಹ ಪರಿಣಾಮಗಳಾಗುತ್ತವೆ. ನಿಮಗೆ ಬೇಗನೆ ದಣಿವಾಗಬಹುದು. ಯಾವಾಗಲೂ ತಲೆನೋವು ಬರುತ್ತದೆ. ನೈಸರ್ಗಿಕ ಸಕ್ಕರೆಯನ್ನು ತ್ಯಜಿಸಿದರೆ ಕ್ರಮೇಣ ನಿಮ್ಮ ದೇಹದ ಮೇಲೆ ಕೆಟ್ಟ ಪರಿಣಾಮಗಳಾಗುತ್ತವೆ. ಇದು ಶಕ್ತಿಯ ಮೂಲವಾಗಿರುವುದರಿಂದ ಸುಸ್ತಾಗಬಹುದು.

ಹೆಚ್ಚುವರಿ ಇನ್ಸುಲಿನ್ ದೇಹದಿಂದ ಕಡಿಮೆಯಾಗಲು ಪ್ರಾರಂಭಿಸುತ್ತದೆ. ನೀವು ಸಂಸ್ಕರಿಸಿದ ಸಕ್ಕರೆಯನ್ನು ತಿನ್ನುವುದನ್ನು ನಿಲ್ಲಿಸಿದರೂ, ಹಣ್ಣುಗಳನ್ನು ಸೇವಿಸುವುದನ್ನು ಮುಂದುವರಿಸಿ. ಇದರಿಂದ ನೀವು ನೈಸರ್ಗಿಕ ಸಕ್ಕರೆಯನ್ನು ಪಡೆಯುತ್ತೀರಿ ಮತ್ತು ದೇಹಕ್ಕೆ ಇದು ಬಲ ನೀಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...