ಕೆಲವರಿಗೆ ಗಬಗಬನೆ ಊಟ ಮಾಡುವ ಹವ್ಯಾಸವಿರುತ್ತದೆ. ಇನ್ನು ಕೆಲವರು ನಿಧಾನವಾಗಿ ಫುಡ್ ಎಂಜಾಯ್ ಮಾಡುತ್ತ ತಿನ್ನುತ್ತಾರೆ. ನೀವೇನಾದ್ರೂ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ರೆ ಇನ್ಮೇಲೆ ನಿಧಾನವಾಗಿ ಊಟ ಮಾಡಿ.
ಯಾಕಂದ್ರೆ ಹೊಸದೊಂದು ಸಂಶೋಧನೆಯ ಪ್ರಕಾರ ನಿಧಾನವಾಗಿ ಊಟ ಮಾಡುವುದರಿಂದ ತೂಕ ಕಡಿಮೆಯಾಗುತ್ತದೆ. ನಿಧಾನವಾಗಿ ಪ್ರತಿ ತುತ್ತನ್ನೂ ಚೆನ್ನಾಗಿ ಅಗಿದು ನುಂಗುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ, ಇದರಿಂದ ತೂಕ ಕಡಿಮೆಯಾಗುತ್ತದೆ ಅಂತಾ ವಿಜ್ಞಾನಿಗಳು ತಿಳಿಸಿದ್ದಾರೆ.
ಅವರ ವಯಸ್ಸು, ತೂಕ, ಲಿಂಗ, ಫುಡ್ ಹ್ಯಾಬಿಟ್, ಬ್ಲಡ್ ಪ್ರೆಶರ್, ಮದ್ಯ ಸೇವನೆ, ತಂಬಾಕು ಬಳಕೆ ಇತ್ಯಾದಿ ಎಲ್ಲಾ ಅಂಶಗಳನ್ನೂ ಪರಿಶೀಲಿಸಲಾಗಿದೆ. ಹಾಗಾಗಿ ಅಧಿಕ ತೂಕ ಹೊಂದಿರುವವರು ಇನ್ಮೇಲೆ ನಿಧಾನವಾಗಿ ಊಟ ಮಾಡುವುದು ಒಳಿತು.