ದೇಹದಲ್ಲಿನ ಹಾರ್ಮೋನ್ಸ್ ಗಳ ಏರಿಳಿತ ಹಾಗೂ ಇಂದಿನ ಜೀವನ ಶೈಲಿಗಳಿಂದ ಮುಖದ ಮೇಲೆ ಕೂದಲುಗಳು ಕಾಣಿಸಿಕೊಂಡು ಮುಖದ ಅಂದವನ್ನು ಕೆಡಿಸುತ್ತದೆ.
ಕೆನ್ನೆಯ ಬಳಿ, ತುಟಿಯ ಮೇಲ್ಭಾಗದಲ್ಲಿ ಕೆಲವರಿಗೆ ಗದ್ದದ ಬಳಿಯೂ ಈ ಕೂದಲು ಕಾಣಿಸಿಕೊಳ್ಳುವುದರಿಂದ ಒಂದು ರೀತಿ ಮುಜುಗರವನ್ನುಂಟು ಮಾಡುತ್ತದೆ. ಮನೆಯಲ್ಲಿರುವ ಕೆಲ ವಸ್ತುಗಳನ್ನು ಉಪಯೋಗಿಸಿಕೊಂಡು ಪ್ಯಾಕ್ ರೀತಿ ಹಚ್ಚುವುದರಿಂದ ಮುಖದ ಮೇಲಿನ ಕೂದಲು ಕ್ರಮೇಣ ಕಡಿಮೆಯಾಗುತ್ತದೆ. ಹೇಗೆ ಮಾಡಬೇಕು ಎಂಬುದರ ಕುರಿತು ಇಲ್ಲಿದೆ ನೋಡಿ ಮಾಹಿತಿ.
ಒಂದು ಬೌಲ್ ತಗೆದುಕೊಂಡು ಅದಕ್ಕೆ ಎರಡು ಚಮಚ ಕಡಲೆ ಹಿಟ್ಟು, ಎರಡು ಚಮಚ ಅಕ್ಕಿಹಿಟ್ಟು, ಒಂದು ಚಮಚ ಕಸ್ತೂರಿ ಅರಿಶಿನ, ಅರ್ಧ ಚಮಚ ನಿಂಬೆ ಹಣ್ಣಿನ ರಸ, ಕಾಲು ಚಮಚ ಹಸಿ ಹಾಲು ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಮುಖ ತೊಳೆದು ಒರೆಸಿಕೊಂಡ ಬಳಿಕ ಹಚ್ಚಿಕೊಳ್ಳಿ.
10 ನಿಮಿಷ ಹಾಗೇ ಇದನ್ನು ಬಿಡಿ. ನಂತರ ಶುದ್ಧವಾದ ನೀರಿನಿಂದ ಮುಖ ತೊಳೆಯಿರಿ. ನಂತರ ಅಲೋವೇರಾ ಜೆಲ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಮುಖವೂ ಅಂದವಾಗುತ್ತದೆ. ಕೂದಲು ನಿವಾರಣೆಯಾಗುತ್ತದೆ. ಸೂಕ್ಷ್ಮ ತ್ವಚೆಯವರು, ಅರಿಶಿನ ಆಗದವರು ಒಂದೇ ಬಾರಿಗೆ ಮುಖಕ್ಕೆ ಹಾಕುವ ಬದಲು ಮೊದಲು ಪರೀಕ್ಷಿಸಿ ಆಮೇಲೆ ಹಾಕಿದರೆ ಒಳ್ಳೆಯದು.