alex Certify ʼಬಾಳೆಹಣ್ಣುʼ ಸೇವಿಸಲು ಸರಿಯಾದ ಸಮಯ ಯಾವುದು ಗೊತ್ತಾ……? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬಾಳೆಹಣ್ಣುʼ ಸೇವಿಸಲು ಸರಿಯಾದ ಸಮಯ ಯಾವುದು ಗೊತ್ತಾ……?

ಸರಿಯಾದ ಸಮಯದಲ್ಲಿ ಹಣ್ಣುಗಳ ಸೇವನೆ ಬಹಳ ಮುಖ್ಯ. ಸರಿಯಾದ ಸಮಯದಲ್ಲಿ ಹಣ್ಣುಗಳನ್ನು ಸೇವನೆ ಮಾಡಿದ್ರೆ ಜೀರ್ಣಕ್ರಿಯೆ  ಸುಲಭವಾಗುತ್ತದೆ. ಬಾಳೆಹಣ್ಣು  ಜನಪ್ರಿಯ ಆಹಾರಗಳಲ್ಲಿ ಒಂದು. ತೂಕ ಇಳಿಸಿಕೊಳ್ಳಲು  ಮತ್ತು ಶಕ್ತಿಗಾಗಿ ಜನರು ಬಾಳೆ ಹಣ್ಣು ತಿನ್ನುತ್ತಾರೆ.

ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆರೋಗ್ಯಕರ ಹೃದಯಕ್ಕೆ ಮತ್ತು ದೇಹದ ಆಯಾಸವನ್ನು ನಿವಾರಿಸಲು ಬಾಳೆಹಣ್ಣು ಬಹಳ ಸಹಾಯಕವಾಗಿದೆ. ಬಾಳೆಹಣ್ಣು ರಕ್ತದೊತ್ತಡವನ್ನು ನಿಯಂತ್ರಿಸಲು, ಒತ್ತಡವನ್ನು ಕಡಿಮೆ ಮಾಡಲು, ಮಲಬದ್ಧತೆ ಮತ್ತು ಹುಣ್ಣು ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಬಾಳೆಹಣ್ಣು ದೇಹದ ಉಷ್ಣತೆಯನ್ನು ಸಹ ನಿಯಂತ್ರಿಸುತ್ತದೆ. ಜನರು ತಮಗೆ ಬೇಕಾದಾಗ ಬಾಳೆಹಣ್ಣು ತಿನ್ನುತ್ತಾರೆ. ಆದರೆ ಬಾಳೆಹಣ್ಣು ತಿನ್ನಲು ಸರಿಯಾದ ಸಮಯ ಯಾವುದು ಎಂದು ಅನೇಕರಿಗೆ ತಿಳಿದಿಲ್ಲ.

ಬೆಳಿಗ್ಗೆ ಉಪಾಹಾರದಲ್ಲಿ ಬಾಳೆಹಣ್ಣು ಸೇವಿಸುವುದು ಒಳ್ಳೆಯದು. ಆದರೆ  ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣನ್ನು ತಿನ್ನಬಾರದು. ದೇಹದಲ್ಲಿನ ಆಮ್ಲೀಯ ಪದಾರ್ಥಗಳ ಪ್ರಮಾಣವನ್ನು ಕಡಿಮೆ ಮಾಡಲು ಬಾಳೆಹಣ್ಣಿನೊಂದಿಗೆ ಒಣ ಹಣ್ಣುಗಳು, ಸೇಬು ಮತ್ತು ಇತರ ಹಣ್ಣುಗಳನ್ನು ಸಹ ಸೇವಿಸಬೇಕು. ಬಾಳೆಹಣ್ಣಿನಲ್ಲಿರುವ ಮೆಗ್ನೀಸಿಯಮ್ ರಕ್ತದಲ್ಲಿನ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಮಟ್ಟವನ್ನು ಸಮತೋಲನಗೊಳಿಸುತ್ತದೆ.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನುವುದರಿಂದ ಹಸಿವು ಉಂಟಾಗುತ್ತದೆ. ಇದು ದೇಹಕ್ಕೆ ಒಳ್ಳೆಯದಲ್ಲ. ಹೆಚ್ಚಿನ ಜನರು ರಾತ್ರಿ  ಮಲಗುವ ಮೊದಲು ಬಾಳೆಹಣ್ಣು ತಿನ್ನುತ್ತಾರೆ. ಆದರೆ ಇದನ್ನು ಮಾಡಬಾರದು. ಏಕೆಂದರೆ ರಾತ್ರಿಯಲ್ಲಿ ಬಾಳೆಹಣ್ಣು ತಿನ್ನುವುದು ಅನಾರೋಗ್ಯವನ್ನುಂಟು ಮಾಡುತ್ತದೆ. ರಾತ್ರಿಯಲ್ಲಿ ಬಾಳೆಹಣ್ಣು ಸೇವಿಸುವುದರಿಂದ ಕೆಮ್ಮು ಉಂಟಾಗುತ್ತದೆ. ಆಯುರ್ವೇದದ ಪ್ರಕಾರ ಬಾಳೆಹಣ್ಣುಗಳನ್ನು ಉಪಾಹಾರದ ನಂತರ ಸೇವಿಸಬೇಕು. ಬಾಳೆಹಣ್ಣು ತಿನ್ನಲು ಸೂಕ್ತ ಸಮಯ ಬೆಳಿಗ್ಗೆ 8 ರಿಂದ 9 ಗಂಟೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...