ಅನೇಕರು ಮನೆಯನ್ನು ವಾಸ್ತು ಪ್ರಕಾರ ನಿರ್ಮಾಣ ಮಾಡ್ತಾರೆ. ವಾಸ್ತು ಪ್ರಕಾರ ನಿರ್ಮಾಣವಾದ ಮನೆಯಲ್ಲಿ ಸದಾ ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಮನೆಯ ಪ್ರತಿಯೊಂದು ಭಾಗವೂ ಮನೆ, ಕುಟುಂಬಸ್ಥರ ಶಾಂತಿ ಮೇಲೆ ಪ್ರಭಾವ ಬೀರುತ್ತದೆ. ಮನೆಗೆ ಕಿಟಕಿ ಕೂಡ ಬಹಳ ಮುಖ್ಯ. ಕಿಟಕಿ ಮನೆಗೆ ಗಾಳಿ, ಬೆಳಕು ಸರಿಯಾಗಿ ಬರಲು ನೆರವಾಗುತ್ತದೆ. ಸಕಾರಾತ್ಮಕ ಶಕ್ತಿ ಮನೆ ಪ್ರವೇಶಕ್ಕೂ ಕಿಟಕಿ ಕಾರಣವಾಗುತ್ತದೆ.
ಮನೆಯಲ್ಲಿರುವ ಕಿಟಕಿ, ಕಿಟಕಿ ಇರುವ ದಿಕ್ಕು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡಬಾರದು, ಮನೆಯಲ್ಲಿ ಸದಾ ಸಂತೋಷ, ಸಮೃದ್ಧಿ ನೆಲೆಸಿರಬೇಕೆಂದ್ರೆ ಮನೆಯ ಕಿಟಕಿ, ದಿಕ್ಕಿನ ಬಗ್ಗೆ ಗಮನ ನೀಡಬೇಕಾಗುತ್ತದೆ.
ಮನೆಯಲ್ಲಿರುವ ಕಿಟಕಿ ಸಮ ಪ್ರಮಾಣದಲ್ಲಿರಬೇಕು. ಇಲ್ಲವೆ 10, 20, 30, 40 ಈ ರೀತಿ ಇರಬೇಕು. ಒಂದು ಗೋಡೆಗೆ ಒಂದಕ್ಕಿಂತ ಹೆಚ್ಚು ಕಿಟಕಿಯನ್ನು ಇಡಬಾರದು. ಗಾತ್ರದಲ್ಲಿಯೂ ಕಿಟಕಿ ದೊಡ್ಡದಾಗಿರಲಿ. ಕೋಣೆ ಅನುಪಾತದಲ್ಲಿ ಕಿಟಕಿ ದೊಡ್ಡದಿದ್ದರೆ ವಾಸ್ತು ಸರಿಯಾಗಿರುವ ಜೊತೆಗೆ ಲಾಭವಾಗಲಿದೆ.
ಲೀವಿಂಗ್ ರೂಮಿನಲ್ಲಿ ಒಂದಕ್ಕಿಂತ ಹೆಚ್ಚು ಕಿಟಕಿಯಿರಲಿ. ಹಾಗೆ ಗೋಡೆ ಮೇಲ್ಭಾಗದಲ್ಲಿ ಕಿಟಕಿ ಇರಲಿ. ಇದ್ರಿಂದ ಗಾಳಿ ಬೆಳಕು ಸರಿಯಾಗಿ ಮನೆ ಪ್ರವೇಶ ಮಾಡುತ್ತದೆ.