ಕಡಲೆ ಹಿಟ್ಟಿನಿಂದ ರುಚಿ ರುಚಿಯಾದ ತಿಂಡಿಗಳನ್ನು ಸವಿಯಬಹುದು. ಜೊತೆಗೆ ಚರ್ಮದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ‍್ಳಬಹುದು. ಈ ಟಿಪ್ಸ್ ಗಳನ್ನು ಒಮ್ಮೆ ಟ್ರೈ ಮಾಡಿ ನೋಡಿ.
*ಡ್ರೈ ಸ್ಕೀನ್ ಹೋಗಲಾಡಿಸಲು ಕಡಲೆಹಿಟ್ಟು ಬಹಳ ಉಪಯೋಗಕಾರಿ. ಇದಕ್ಕೆ ಹಾಲು, ಜೇನುತುಪ್ಪ, 1 ಚಿಟಿಕೆ ಅರಶಿಣ ಬೆರೆಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ. ಹೀಗೆ ಮಾಡುತ್ತಾ ಬಂದರೆ ಚರ್ಮದ ತೇವಾಂಶ ಹೆಚ್ಚಿಸಿ ಡ್ರೈ ಸ್ಕಿನ್ ಸಮಸ್ಯೆ ದೂರವಾಗುತ್ತದೆ.
* ಆಯಿಲ್ ಸ್ಕೀನ್ ಹೋಗಲಾಡಿಸಲು ಕಡಲೆಹಿಟ್ಟಿಗೆ ಕೆಲವು ಹನಿ ರೋಸ್ ವಾಟರ್ ನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ, ಪ್ಯಾಕ್ ಒಣಗಿದ ನಂತರ ಅದನ್ನು ತೊಳೆಯಿರಿ.
* ಮೊಡವೆ ಸಮಸ್ಯೆ ನಿವಾರಿಸಲು ಕಡಲೆ ಹಿಟ್ಟಿಗೆ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ. ಇದರಿಂದ ಮೊಡವೆ ಸಮಸ್ಯೆ ದೂರವಾಗುತ್ತದೆ.
* ಮುಖದಲ್ಲಿ ಸೇರಿಕೊಂಡ ಕೊಳೆ, ಧೂಳನ್ನು ಹೋಗಲಾಡಿಸಲು ಕಡಲೆ ಹಿಟ್ಟಿನ ಜೊತೆಗೆ ಸೌತೆಕಾಯಿ ರಸವನ್ನು ಮಿಕ್ಸ್ ಮಾಡಿ ಹಚ್ಚಿ ಒಣಗಿದ ನಂತರ ತೊಳೆಯರಿ.
* ಕಪ್ಪಾದ ಮುಖದ ಕಾಂತಿ ಹೆಚ್ಚಿಸಲು ಕಡಲೆಹಿಟ್ಟು, ನಿಂಬೆ ರಸ, ಅರಶಿಣ, ರೋಸ್ ವಾಟರ್ ಬೆರೆಸಿ ಮುಖಕ್ಕೆ ಹಚ್ಚಿ ಒಣಗಿದ ನಂತರ ತೊಳೆಯಿರಿ. ನಿಯಮಿತವಾಗಿ ಹೀಗೆ ಮಾಡುತ್ತಾ ಬಂದರೆ ಚರ್ಮ ನಯವಾಗುವುದರ ಜೊತೆಗೆ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.