ಪ್ರತಿನಿತ್ಯ ಧೂಳು, ಮಾಲಿನ್ಯದಲ್ಲಿ ತ್ವಚೆ ತನ್ನ ಹೊಳಪನ್ನು ಕಳೆದುಕೊಳ್ಳುವುದು ಸಹಜ. ಈ ಹಿನ್ನೆಲೆಯಲ್ಲಿ ಪ್ರಕೃತಿ ಹಲವಾರು ಗಿಡ ಮೂಲಿಕೆಗಳನ್ನು ವರದಾನವಾಗಿ ಕೊಟ್ಟಿದೆ. ಅವುಗಳನ್ನು ಬಳಸಿಕೊಂಡು ದೀರ್ಘಕಾಲದವರೆಗೆ ನಾವು ಸುಂದರವಾಗಿ ಕಾಣಬಹುದು. ನಿಸರ್ಗದ ಈ ಅಮೂಲ್ಯ ಉಡುಗೊರೆಗಳಲ್ಲಿ ಅಲೋವೆರಾ ಕೂಡ ಒಂದು.
ಅಲೋವೆರಾ ಲೋಳೆಯನ್ನು ಮುಖಕ್ಕೆ ಹಚ್ಚುವುದರಿಂದ ಹಲವಾರು ಪ್ರಯೋಜನಗಳಿವೆ.
ಮುಖದ ಉರಿಯೂತ, ಗೀರುಗಳಿದ್ದರೆ ಅದನ್ನು ನಿವಾರಿಸುತ್ತದೆ.
ಕೊಲೆಜಿನ್ ಉತ್ಪತ್ತಿ ಮಾಡಲು ಸಹಕರಿಸುತ್ತದೆ.
ಹೆಚ್ಚು ಸಮಯ ತೆಗೆದುಕೊಳ್ಳುವ ಗಾಯದ ಗುರುತುಗಳನ್ನು ಬಹು ಬೇಗನೆ ಗುಣಪಡಿಸುತ್ತದೆ.
ಅಲೋವೆರಾ ಶೇ 96 ರಷ್ಟು ನೀರಿನಿಂದ ಆವೃತ್ತವಾಗಿದೆ. ಆದ್ದರಿಂದ ತ್ವಚೆಗೆ ಅಗತ್ಯವಾದ ಮಾಯಿಸ್ಚರೈಸರ್ ಸಿಗುತ್ತದೆ.
ಅಲ್ಲದೇ ವಿಟಮಿನ್ ಎ, ಬಿ, ಸಿ ಮತ್ತು ಇ ಅಂಶಗಳಿವೆ. ಇದರಿಂದ ಮುಖದಲ್ಲಿ ಹೊಳಪು ಮೂಡುತ್ತದೆ.
ಹಾಗಾದರೆ ಅಲೋವೆರಾ ಬಳಸಿ ಯಾವೆಲ್ಲಾ ಫೇಸ್ಪ್ಯಾಕ್ ಮಾಡಬಹುದು ನೋಡೋಣ ಬನ್ನಿ.
ಹೊಳೆಯುವ ತ್ವಚೆ : ಕಳೆಗುಂದಿದ ಮುಖಕ್ಕೆ ಗ್ಲೋ ನೀಡಲು ಅಲೋವೆರಾ ಸ್ಕ್ರಬ್ ಟ್ರೈ ಮಾಡಿ. 1 ಟೇಬಲ್ ಸ್ಪೂನ್ ಅಲೋವೆರಾ ಜೆಲ್, 1 ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆ, 1 ಟೇಬಲ್ ಸ್ಪೂನ್ ಬ್ರೌನ್ ಶುಗರ್ ಸೇರಿಸಿ ಮಿಕ್ಸ್ ಮಾಡಿ. 3-4 ನಿಮಿಷ ಮುಖಕ್ಕೆ ಮಸಾಜ್ ಮಾಡಿಕೊಂಡರೆ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.
ಡ್ರೈ ಸ್ಕಿನ್ ನಿವಾರಣೆಗೆ : 1 ಟೇಬಲ್ ಸ್ಪೂನ್ ಅಲೋವೆರಾ ಜೆಲ್, ಅರ್ಧ ಟೀ ಸ್ಪೂನ್ ಎಕ್ಸ್ಟ್ರಾ ವರ್ಜಿನ್ ಆಲಿವ್ ಆಯಿಲ್, 1 ಟೀ ಸ್ಪೂನ್ ಜೇನಿನ ಹನಿ ಸೇರಿಸಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಫೇಸ್ಪ್ಯಾಕ್ ರೀತಿ ಮುಖಕ್ಕೆ ಹಚ್ಚಿ 5- 7 ನಿಮಿಷಗಳ ಬಳಿಕ ಮುಖ ತೊಳೆಯಿರಿ.
ಆಯಿಲ್ ಸ್ಕಿನ್ : 1 ಟೇಬಲ್ ಸ್ಪೂನ್ ಅಲೋವೆರಾ ಜೆಲ್, 1 ಟೀಸ್ಪೂನ್ ಯೋಗರ್ಟ್, ಅರ್ಧ ಚಮಚ ನಿಂಬೆರಸ ಸೇರಿಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 7-8 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆದುಕೊಳ್ಳಿ. ಇದರಿಂದ ತ್ವಚೆಯಲ್ಲಿ ಹೆಚ್ಚಾಗಿರುವ ಎಣ್ಣೆಯ ಅಂಶ ನಿವಾರಣೆಯಾಗುತ್ತದೆ.