ಕೊರೊನಾ ಬಂದಾಗಿನಿಂದ ರೋಗನಿರೋಧಕ ಶಕ್ತಿಯ ಮಹತ್ವ ಎಲ್ಲರಿಗೂ ಅರಿವಾಗಿದೆ. ಕಲ್ಲಂಗಡಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಪರಿಣಾಮಕಾರಿ ಅನ್ನೋದು ಸಾಬೀತಾಗಿದೆ. ಕಲ್ಲಂಗಡಿ ಮಾತ್ರವಲ್ಲ ಅದರ ಬೀಜಗಳ ಸೇವನೆಯಿಂದ್ಲೂ ನಿಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ.
ಕಲ್ಲಂಗಡಿ ಬೀಜಗಳನ್ನು ತಿನ್ನುವುದರಿಂದ ಅದರಲ್ಲಿರುವ ಪ್ರೋಟೀನ್ ಮತ್ತು ಅಮೈನೋ ಆಮ್ಲಗಳು ನಿಮ್ಮ ರಕ್ತದೊತ್ತಡದ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಲ್ಲಂಗಡಿ ಬೀಜಗಳು ನಿಮ್ಮ ಅಂಗಾಂಶವನ್ನು ಸರಿಪಡಿಸುವ ಮೂಲಕ ಸ್ನಾಯುಗಳನ್ನು ಆರೋಗ್ಯಕರವಾಗಿಸುತ್ತವೆ. ಸ್ನಾಯುಗಳ ನೋವನ್ನು ತೊಡೆದು ಹಾಕಲು ಪರಿಣಾಮಕಾರಿ ಎಂಬುದು ಕೂಡ ಸಾಬೀತಾಗಿದೆ.
ಕಲ್ಲಂಗಡಿ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಮೊನೊಸ್ಯಾಚುರೇಟೆಡ್ ಮತ್ತು ಬಹು ಅಪರ್ಯಾಪ್ತ ಕೊಬ್ಬಿನಾಮ್ಲಗಳಿವೆ. ಇದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ಬೇಸಿಗೆಯಲ್ಲಿ ಬಹಳ ಬೇಗ ದಣಿವಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ನೀವು ಕಲ್ಲಂಗಡಿ ಬೀಜಗಳನ್ನು ಸೇವಿಸಬೇಕು. ಇದರಿಂದ ನಿಮ್ಮ ದೇಹವು ಶಕ್ತಿ ಬರುತ್ತದೆ. ಹಿಮೋಗ್ಲೋಬಿನ್ ಕೂಡ ಹೆಚ್ಚಾಗುತ್ತದೆ.
ನೀವು ಅಧಿಕ ತೂಕ ಹೊಂದಿದ್ದರೆ, ಸ್ಥೂಲಕಾಯದ ಸಮಸ್ಯೆ ಇದ್ದರೆ ಕಡಿಮೆ ಕ್ಯಾಲೋರಿ ಹೊಂದಿರುವ ಕಲ್ಲಂಗಡಿ ಬೀಜಗಳ ಸೇವನೆ ಉತ್ತಮ. ಈ ಮೂಲಕ ತೂಕವನ್ನು ನಿಯಂತ್ರಣದಲ್ಲಿ ಇಡಬಹುದು. ಕಲ್ಲಂಗಡಿ ಬೀಜಗಳನ್ನು ಸಲಾಡ್ ಜೊತೆ ಸೇರಿಸಿ ತಿನ್ನಬಹುದು. ಅಥವಾ ತರಕಾರಿಗಳೊಂದಿಗೆ ಹಾಕಿ ಡಿಶ್‌ಗಳನ್ನು ತಯಾರಿಸಿಕೊಳ್ಳಿ. ಇಲ್ಲವಾದರೆ ಹುರಿದು ಕೂಡ ತಿನ್ನಬಹುದು.