
ಸಾಮಾನ್ಯವಾಗಿ ಎಲ್ಲರೂ ಬೆಳಗ್ಗೆ ಎದ್ದ ತಕ್ಷಣ ರಿಫ್ರೆಶ್ ಆಗಲು ಚಹಾ ಕುಡಿಯುತ್ತೇವೆ. ಇದನ್ನು ಬೆಡ್ ಟೀ ಎಂದು ಕರೆಯಲಾಗುತ್ತದೆ. ಚಹಾದೊಂದಿಗೆ ದಿನವನ್ನು ಪ್ರಾರಂಭಿಸುವ ಅಭ್ಯಾಸವು ಭಾರತದಲ್ಲಿ ಬಹಳ ಹಳೆಯದು. ಆದರೆ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ಆರೋಗ್ಯಕ್ಕೆ ಬಹಳಷ್ಟು ಹಾನಿಯಾಗುತ್ತದೆ.
ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಬೆಡ್ ಟೀ ಕುಡಿಯಬಾರದು. ಇದರಲ್ಲಿರುವ ಕೆಫೀನ್ ದೇಹದಲ್ಲಿ ಕರಗಿದ ತಕ್ಷಣ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದು ಭವಿಷ್ಯದಲ್ಲಿ ಹೃದ್ರೋಗದ ಅಪಾಯಕ್ಕೆ ಕಾರಣವಾಗಬಹುದು.
ನಾವು ಉದ್ವೇಗ ಮತ್ತು ಒತ್ತಡವನ್ನು ನಿವಾರಿಸಲು ಬೆಳಿಗ್ಗೆ ಚಹಾವನ್ನು ಕುಡಿಯುತ್ತೇವೆ. ಆದರೆ ಹೀಗೆ ಮಾಡುವುದರಿಂದ ಒತ್ತಡ ಹೆಚ್ಚಾಗುತ್ತದೆ. ಚಹಾದಲ್ಲಿ ಕೆಫೀನ್ ಪ್ರಮಾಣವು ಅಧಿಕವಾಗಿರುವುದರಿಂದ ಇದು ಕ್ಷಣಾರ್ಧದಲ್ಲಿ ನಿದ್ರೆಯನ್ನು ಓಡಿಸುತ್ತದೆ. ಈ ರೀತಿ ಮಾಡುವುದರಿಂದ ಒತ್ತಡ ಹೆಚ್ಚಾಗುತ್ತದೆ ಎನ್ನುತ್ತಾರೆ ತಜ್ಞರು.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು ಜೀರ್ಣಕ್ರಿಯೆಗೆ ಒಳ್ಳೆಯದಲ್ಲ. ಇದರಿಂದ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಉಂಟಾಗುತ್ತದೆ. ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಚಹಾ ನಿಧಾನಗೊಳಿಸುತ್ತದೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸಕ್ಕರೆ ಹಾಕಿದ ಚಹಾ ಕುಡಿದರೆ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗುತ್ತದೆ. ದೇಹದ ಅನೇಕ ಜೀವಕೋಶಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಪಡೆಯುವುದಿಲ್ಲ. ಇದು ದೀರ್ಘಾವಧಿಯಲ್ಲಿ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.
ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದರೆ ಹೊಟ್ಟೆಯೊಳಗೆ ಗಾಯವಾಗಬಹುದು ಎನ್ನುತ್ತಾರೆ ತಜ್ಞರು. ಯಾಕಂದ್ರೆ ಇದರಿಂದ ಅಲ್ಸರ್ ಸಮಸ್ಯೆ ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವ ಅಭ್ಯಾಸ ಬಿಟ್ಟುಬಿಡುವುದೇ ಒಳ್ಳೆಯದು.