ಮಹಿಳೆಯರೇ ವಯಸ್ಸು 50 ದಾಟಿದ ಮೇಲೆ ತ್ವಚೆಯ ಆರೈಕೆ ಹೀಗಿರಲಿ

ಎಷ್ಟೇ ವಯಸ್ಸಾದರೂ ನಮ್ಮನ್ನು ನಾವು ಸುಂದರವಾಗಿಟ್ಟುಕೊಳ್ಳುವುದು ಜೀವನ ಪ್ರೀತಿ. ಅದರಲ್ಲೂ 50 ದಾಟಿತು ಇನ್ನೇನಿದೆ ಎನ್ನುವ ಧೋರಣೆಯಂತೂ ಖಂಡಿತಾ ಸಲ್ಲದು.

ಈಗ ನಿಮ್ಮ ತ್ವಚೆಗೆ ಹೆಚ್ಚು ಆರೈಕೆ ಮಾಡಬೇಕಾದ ಸಮಯ. ಇದಕ್ಕಾಗಿ ಕಾಸ್ಮೆಟಿಕ್ಸ್ ಅಥವಾ ಫೇಶಿಯಲ್ ಅಭ್ಯಾಸ ಬೇಡ. ಬದಲಿಗೆ ನಿಮ್ಮ ದಿನಚರಿಯಲ್ಲಿ ಒಂದಿಷ್ಟು ಕ್ರಮಗಳನ್ನು ಅನುಸರಿಸಿದ್ರೆ ಸಾಕು. ಹಾಗಾದ್ರೆ ವಯಸ್ಸು 50 ದಾಟಿದ ಮೇಲೆ ತ್ವಚೆಯನ್ನು ಕಾಪಾಡಿಕೊಳ್ಳುವುದು ಹೇಗೆ ಅನ್ನೋದನ್ನ ನೋಡೋಣ ಬನ್ನಿ.

1. ಬೆಳಿಗ್ಗೆ 10 ರಿಂದ ಸಂಜೆ 4 ರ ನಡುವಿನ ಸೂರ್ಯನ ಬೆಳಕಿಗೆ ಮುಖವನ್ನು ಒಡ್ಡಬೇಡಿ. ತೆಳುವಾದ, ಗಾಳಿಯಾಡುವ ಪೂರ್ತಿ ತೋಳಿನ ಶರ್ಟ್ ಉಡುಗೆ ಧರಿಸಿ. ಇಲ್ಲವೇ ಛತ್ರಿ ಉಪಯೋಗಿಸಿ.

2. ಸ್ನಾನದ ನಂತರ ಹರ್ಬಲ್ ಕ್ರೀಂ ನಿಂದ ಮಸಾಜ್ ಮಾಡಿ. ಆದಷ್ಟು ಕೆಮಿಕಲ್​ಗಳನ್ನು ಅವಾಯ್ಡ್ ಮಾಡಿ.

3. ಬಿಸಿ ನೀರಿನ ಬದಲಿಗೆ ತಣ್ಣೀರಿನಲ್ಲಿ ಮುಖ ತೊಳೆಯಿರಿ. ಇದರಿಂದ ತ್ವಚೆ ಶುಷ್ಕವಾಗುವುದಿಲ್ಲ.

4. ಪ್ರತಿನಿತ್ಯ ತಪ್ಪದೇ 8 ಗ್ಲಾಸ್ ನೀರು ಕುಡಿಯಿರಿ.

5. ಹೆಚ್ಚಿನ ಫೌಂಡೇಷನ್ ಕ್ರೀಂ ಅಥವಾ ಬ್ಲಶ್​ಗಳನ್ನು ಬಳಸಬೇಡಿ. ಇದು ನಿಮ್ಮ ಮುಖದ ಮೇಲಿನ ಸುಕ್ಕನ್ನು ಎತ್ತಿ ತೋರುತ್ತದೆ.

6. ಲಿಪ್​ಸ್ಟಿಕ್ ಬದಲಿಗೆ ಲಿಪ್​ ಗ್ಲಾಸ್ ಬಳಸಿ ಇದು ತುಟಿಗೆ ಶೈನಿಂಗ್ ನೀಡುವುದಲ್ಲದೇ ನಿಮ್ಮನ್ನು ಇನ್ನಷ್ಟು ಸ್ಟೈಲೀಶ್​ ಆಗಿ ತೋರಿಸುತ್ತದೆ.

7. ಆದಷ್ಟು ತಂಪಾದ ವಾತಾವರಣದಲ್ಲಿ ವಾಯುವಿಹಾರ ಮಾಡಿ. ನಿಮ್ಮ ಆತ್ಮೀಯರೊಟ್ಟಿಗೆ ಸಮಯ ಕಳೆಯಿರಿ. ಅದರಲ್ಲೂ ಪುಟ್ಟ ಮಕ್ಕಳೊಟ್ಟಿಗೆ ಹೆಚ್ಚು ಒಡನಾಟವಿದ್ದಷ್ಟು ಸಂತೋಷ ಹೆಚ್ಚುತ್ತದೆ. ಇದು ನಿಮ್ಮ ಮುಖದ ಹೊಳಪನ್ನು ಒಳಗಿನಿಂದ ಇಮ್ಮಡಿಗೊಳಿಸುತ್ತದೆ.

8. ಆದಷ್ಟು ನಿಮ್ಮ ದೇಹ ಮತ್ತು ಆರೋಗ್ಯಕ್ಕೆ ಅನುಗುಣವಾದ ಹಣ್ಣು, ತರಕಾರಿ ಮತ್ತು ಸೊಪ್ಪು ಸೇವಿಸಿ. ಪೋಷಕಾಂಶದ ಜೊತೆಗೆ ನಿಮ್ಮ ದೇಹಕ್ಕೆ ಶಕ್ತಿಯನ್ನೂ ನೀಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read