ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ದುಬಾರಿ ಫೇಶಿಯಲ್ ಮೊರೆ ಹೋಗುವ ಬದಲಿಗೆ ಕಿತ್ತಳೆ ಹಣ್ಣಿನ ರಸವನ್ನು ಮುಖಕ್ಕೆ ಹಚ್ಚುವುದರಿಂದ ಹಲವಾರು ಪ್ರಯೋಜನಗಳಿವೆ. ಕಳೆಗುಂದಿದ ಮುಖ, ಟ್ಯಾನ್ ಸ್ಕಿನ್ ಸಮಸ್ಯೆಯಿಂದ ಬಹುಬೇಗನೇ ಹೊರಬಹುದು. ಅಲ್ಲದೇ ಪ್ರತಿದಿನ ಕಿತ್ತಳೆ ಹಣ್ಣನ್ನು ಹಿತ – ಮಿತವಾಗಿ ತಿನ್ನುತ್ತಾ ಬಂದರೆ ತ್ವಚೆ ಗ್ಲೋ ಪಡೆದುಕೊಳ್ಳುತ್ತದೆ. ಕಿತ್ತಳೆ ಹಣ್ಣು ಸಿಟ್ರಿಕ್ ಫ್ರೂಟ್ ಆಗಿರುವ ಕಾರಣ ಊಟವಾದ 30 ನಿಮಿಷಗಳ ನಂತರ ಸೇವಿಸಬಹುದು. ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು.
ಕಿತ್ತಳೆ ಹಣ್ಣಿನ ಫೇಸ್ಪ್ಯಾಕ್ನಿಂದ ಏನೆಲ್ಲಾ ಲಾಭಗಳಿವೆ ಅನ್ನೋ ಪಟ್ಟಿ ಇಲ್ಲಿದೆ ನೋಡಿ.
ವಿಟಮಿನ್ ಸಿ : ತ್ವಚೆಯ ಗ್ಲೋ ಹೆಚ್ಚಿಸಲು ವಿಟಮಿನ್ ಸಿ ಅತ್ಯಗತ್ಯ. ಈ ನಿಟ್ಟಿನಲ್ಲಿ ಕಿತ್ತಳೆ ಹಣ್ಣಿನ ರಸವನ್ನು ಹದಿನೈದು ದಿನಕ್ಕೊಮ್ಮೆ ಮುಖಕ್ಕೆ ಹಚ್ಚುವುದರಿಂದ ಅದ್ಭುತ ಬದಲಾವಣೆ ಗಮನಿಸಬಹುದು. 3-5 ನಿಮಿಷಗಳ ಪ್ಯಾಕ್ ಹಾಕಿಕೊಂಡು ಉತ್ತಮ ರಿಸಲ್ಟ್ ಪಡೆಯಬಹುದು.
ಮೊಡವೆ ನಿವಾರಣೆ: ನಿಮಗೆ ಮೊಡವೆ ಸಮಸ್ಯೆಗಳಿದ್ದಲ್ಲಿ ಕಿತ್ತಳೆ ಹಣ್ಣಿನ ಫೇಸ್ಪ್ಯಾಕ್ ಮಾಡಿಕೊಂಡರೆ ಪರಿಹಾರ ಸಿಗುತ್ತದೆ. ಕಿತ್ತಳೆಯಲ್ಲಿರುವ ಸಿಟ್ರಿಕ್ ಅಂಶ ಮೊಡವೆ ಬಾರದಂತೆ ತಡೆಯುತ್ತದೆ.
ಬೇಗ ವಯಸ್ಸಾಗುವುದನ್ನು ತಡೆಯುತ್ತದೆ : ಕಿತ್ತಳೆಯಲ್ಲಿರುವ ವಿಟಮಿನ್ ಸಿ ಅಂಶವು ಕೊಲೆಜಿನ್ ಉತ್ಪತ್ತಿಗೆ ನೆರವಾಗುತ್ತದೆ. ಅಲ್ಲದೇ ತ್ವಚೆಗೆ ವಯಸ್ಸಾಗದಂತೆ ಕಾಯ್ದುಕೊಳ್ಳುತ್ತದೆ.
ಪೋರ್ಸ್ಗಳನ್ನು ಮುಚ್ಚುತ್ತದೆ : ಮುಖದಲ್ಲಿ ಓಪನ್ ಪೋರ್ಸ್ ಸಮಸ್ಯೆ ಇದ್ದರೆ ಕಿತ್ತಳೆ ಹಣ್ಣಿನ ಫೇಸ್ಪ್ಯಾಕ್ ಹಚ್ಚುವುದರಿಂದ ಕ್ರಮೇಣ ಪರಿಹಾರವನ್ನು ಕಾಣಬಹುದು. ಅಷ್ಟೇ ಅಲ್ಲದೇ ಮೃದುವಾದ ತ್ವಚೆ ನಿಮ್ಮದಾಗುತ್ತದೆ.
ರೋಗನಿರೋಧಕ ಶಕ್ತಿ : ಕಿತ್ತಳೆಯಲ್ಲಿರುವ ರೋಗನಿರೋಧಕ ಶಕ್ತಿಯೂ ನಿಮ್ಮ ತ್ವಚೆಯಲ್ಲಿರುವ ಟಾಕ್ಸಿನ್ ಅಂಶವನ್ನು ಹೊರ ಹಾಕುತ್ತದೆ. ಆ ಮೂಲಕ ತ್ವಚೆ ಆರೋಗ್ಯಪೂರ್ಣವಾಗಿರುತ್ತದೆ.